ಕಾಯಿಲೆಗಳ ಲಕ್ಷಣಗಳನ್ನು ತಿಳಿಯದೇ ಇರುವುದರಿಂದ ರೋಗಿಗಳು ಮತ್ತಷ್ಟು ಭೀತಿಗೊಳಗಾಗುವ ಸಂಭವವಿರುತ್ತದೆ. ಇದರಿಂದ, ಕೆಲವರು ಶೋಷಣೆಗೆ ಒಳಗಾಗುತ್ತಾರೆ. ಇಂತಹ ಅಪಾಯವನ್ನು ತಡೆಯುವ ಉದ್ದೇಶದೊಂದಿಗೆ ಡಾ. ಎಚ್.ಡಿ. ಚಂದ್ರಪ್ಪಗೌಡ ಅವರು ‘ಸಾಮಾನ್ಯ ಶಸ್ತ್ರ ವೈದ್ಯದ ಕಾಯಿಲೆಗಳು’ ಪುಸ್ತಕವನ್ನು ಬರೆದಿದ್ದಾರೆ.
ಕಾಯಿಲೆಗಳ ಉಗಮ, ಲಕ್ಷಣಗಳು, ಅವುಗಳ ಚಿಕಿತ್ಸಾ ವಿಧಾನ ಮುಂತಾದವುಗಳ ಬಗ್ಗೆ ವಿವರ ಮಾಹಿತಿ ಇದೆ. ಕಲ್ಲೊತ್ತು, ಉಗುರುಸುತ್ತು, ಮಚ್ಚೆಯಂತಹ ಸಣ್ಣ ಸಣ್ಣ ರೋಗಗಳ ಬಗ್ಗೆಯೂ ಇಲ್ಲಿ ಮಾಹಿತಿ ಇದೆ. ಶಸ್ತ್ರಚಿಕಿತ್ಸಾ ಪದ್ಧತಿಯ ಇತಿಹಾಸ, ಬೆಳೆದು ಬಂದ ಬಗೆ, ಈ ಕ್ಷೇತ್ರದಲ್ಲಿ ಭಾರತೀಯರ ಕೊಡುಗೆ ಇವೇ ಮುಂತಾದ ಮಾಹಿತಿಗಳ ಕಣಜ ಈ ಕೃತಿ. ಶಸ್ತ್ರಚಿಕಿತ್ಸೆಯಂತಹ ಜಟಿಲ ವಿಷಯವನ್ನು ಕನ್ನಡದಲ್ಲಿ ತೀರಾ ಸರಳವಾಗಿ ಬರೆದಿರುವುದು ಈ ಕೃತಿಯ ವೈಶಿಷ್ಟ್ಯ.
©2025 Book Brahma Private Limited.