ನಮ್ಮ ಆಹಾರ ಪದ್ದತಿಯಲ್ಲಿನ ಬದಲಾವಣೆಯು ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಬದಲಾದ ಜೀವನ ಕ್ರಮ,ಹತಾಷೆ,ಇನ್ನು ಹಲವಾರು ಕಾರಣಗಳಿಂದಾಗಿ ಜನರು ಆತ್ಮಹತ್ಯೆ ಒಂದೇ ಪರಿಹಾರ ಎಂದು ಭಾವಿಸುವಂತಾಗಿದೆ. ಗ್ಲೋಬಲೀಕರಣದಿಂದ ನಮ್ಮ ಜೀವನ ಪದ್ದತಿ ಬದಲಾವಣೆಯಾಗಿದೆ. ನಮ್ಮ ಆಹಾರ ಪದ್ದತಿಯಲ್ಲಿ ಏರುಪೇರಾಗಿದೆ. ಕೃಷಿ ವಿಶ್ವವಿದ್ಯಾನಿಲಯಗಳು ಜೈವಕೃಷಿಗೆ ಪ್ರೋತ್ಸಾಹ ನಿಡುತ್ತಿಲ್ಲ. ಸರಿಯಾದ ಮಾರ್ಗದರ್ಶನ ಸಿಗದೆ ರೈತರು ಕಂಗಾಲಗಿದ್ದಾರೆ.ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲಿ ಆಹಾರದ ಸಮತೋಲನ ಕಾಪಾಡಿಕೊಳ್ಳುಬೇಕು, ನಮ್ಮ ಆಹಾರ ಪದ್ಧತಿ ಏನು ಎಂಬುದನ್ನು ಲೇಖಕರು ವಿವರಿಸಿ ಆಧುನೀಕಣದ ಸೋಗಿನಲ್ಲಿರುವ ಜನರನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆಯಲ್ಲಿ ಜನಿಸಿದ ಚಂದ್ರಿಕಾ ಅವರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ತಮ್ಮ ವ್ಯಾಸಂಗವನ್ನು ನಡೆಸಿದರು. ‘ಕನ್ನಡ ಸಾಹಿತ್ಯ ವಿಮರ್ಶೆಯ ಐತಿಹಾಸಿಕ ಅಧ್ಯಯನ’ ಇವರ ಪಿಎಚ್. ಡಿ ಪ್ರಬಂಧ. ಹಲವಾರು ಕಿರುತೆರೆ ಧಾರಾವಾಹಿಗಳು ಮತ್ತು ಸಿನಿಮಾಗಳಿಗೆ ಕಥಾ ವಿಸ್ತರಣೆ, ಸಂಭಾಷಣೆ, ಕಿರುಚಿತ್ರಗಳ ನಿರ್ದೇಶನ, ನಿರ್ಮಾಣ, ನಿರ್ವಹಣೆ, ರಾಜ್ಯಮಟ್ಟದ ವಿಚಾರ ಸಂಕಿರಣ, ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ಕವಿತಾ ವಾಚನ, ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಹ ಸಂಪಾದಕಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯೆಯಾಗಿ ಕೆಲಸ ನಿರ್ವಹಣೆ ಮಾಡಿದ ಅನುಭವ ಲೇಖಕಿಯದು. ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ, ಸೂರ್ಯಗಂಧೀ ...
READ MORE