‘ಪುಷ್ಪೌಷದಿ’ ವಸುಂಧರಾ ಭೂಪತಿ ಅವರ ಕೃತಿಯಾಗಿದೆ. ಹೂವು ಕೇವಲ ಚೆಲುವು ಮತ್ತು ಸುಗಂಧಗಳಿಗೆ ಮಾತ್ರ ಸೀಮಿತವಾಗಿರದೆ ತನ್ನಲ್ಲಿರುವ ಅಪೂರ್ವ ಔಷಧೀಯ ಗುಣಗಳಿಗೂ ಹೆಸರಾಗಿದೆ. ಒಂದು ಕ್ಷಣ ಹೆಚ್ಚೆಂದರೆ ಒಂದು ದಿನದ ತಮ್ಮ ಜೀವಿತಾವಧಿಯಲ್ಲಿ ಅವು ಗಳಿಸಿರುವ ಜನಪ್ರಿಯತೆ ಕಡಿಮೆಯೇನು ಅಲ್ಲ ಎಂದು ಈ ಕೃತಿ ತಿಳಿಸುತ್ತದೆ.
ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ. ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...
READ MOREಹೊಸತು-2004- ಎಪ್ರಿಲ್
ಹೂವು ಕೇವಲ ಚೆಲುವು ಮತ್ತು ಸುಗಂಧಗಳಿಗೆ ಮಾತ್ರ ಸೀಮಿತ ವಾಗಿರದೆ ತನ್ನಲ್ಲಿರುವ ಅಪೂರ್ವ ಔಷಧೀಯ ಗುಣಗಳಿಗೂ ಹೆಸರಾಗಿದೆ. ಒಂದು ಕ್ಷಣ ಹೆಚ್ಚೆಂದರೆ ಒಂದು ದಿನದ ತಮ್ಮ ಜೀವಿತಾವಧಿಯಲ್ಲಿ ಅವು ಗಳಿಸಿರುವ ಜನಪ್ರಿಯತೆ ಕಡಿಮೆಯದೇನೂ ಅಲ್ಲ. ಆಯುರ್ವೇದ ಔಷಧಿಗಳಲ್ಲಿ ಹೂವಿನ ಉಪಯೋಗದ ಪ್ರಸ್ತಾಪವಿದ್ದು ದೈಹಿಕ - ಮಾನಸಿಕ ಆರೋಗ್ಯವರ್ಧನೆಗೆ ಅವುಗಳ ಅಪಾರ ಕೊಡುಗೆಯನ್ನು ತಿಳಿಸಲಾಗಿದೆ. ಆರೋಗ್ಯಕ್ಕೂ ಹೂವುಗಳಿಗೂ ಇರುವ ನಿಕಟ ಸಂಬಂಧವನ್ನು ಕೃತಿಯ ಮೂಲಕ ಆಯುರ್ವೇದ ವೈದ್ಯೆ ವಸುಂಧರಾ ಭೂಪತಿ ತಿಳಿಸಿದ್ದಾರೆ.