ಹಿರಿಯ ಲೇಖಕ ಜೀವಿ (ಜಿ.ಕೆ. ಕುಲಕರ್ಣಿ) ಅವರ ಕೃತಿ-ಔಷಧಿಯಿಲ್ಲದೇ ಬದುಕಲು ಕಲಿಯಿರಿ. ಆರೋಗ್ಯದಲ್ಲಿ ಸ್ವಲ್ಪ ಏರು-ಪೇರಾದರೂ ಇಂದಿನ ಜನ ಔಷಧಿಗಳಿಗೆ ಮೊರೆ ಹೋಗುತ್ತಾರೆ. ಅನಗತ್ಯವಾಗಿ ಔಷಧಿಗಳನ್ನು ಸೇವಿಸಿ, ಅವರ ಆರೋಗ್ಯವನ್ನು ಹದಗೆಡಿಸಿಕೊಳ್ಳುತ್ತಾರೆ. ದೇಹಕ್ಕೆ ಆ ಔಷಧಿ ಅಗತ್ಯವಿದೆಯೋ, ಇಲ್ಲವೋ ನೋಡಹೋಗುವುದಿಲ್ಲ. ಹೀಗಾಗಿ, ಅಡ್ಡ ಪರಿಣಾಮಗಳನ್ನು ಆಹ್ವಾನಿಸಿಕೊಳ್ಳುತ್ತಾರೆ. ಆದಷ್ಟು ದೇಹವನ್ನು ರಾಸಾಯನಿಕ ಔಷಧಿಗಳಿಂದ ದೂರ ಇರಿಸಬೇಕು. ಔಷಧಿಯಿಲ್ಲದೇ ಬದುಕುವುದನ್ನು ಕಲಿಯಬೇಕು. ಪ್ರಾಕೃತಿಕ ನಿಯಮಗಳಿಗೆ ಅನುಗುಣವಾಗಿ ಆರೋಗ್ಯವನ್ನು ಕಾಯ್ದುಕೊಳ್ಳಬೇಕು ಎಂಬುದು ಈ ಕೃತಿಯ ಆಶಯವಾಗಿದೆ.
ಮೂಲತಃ ವಿಜಯಪುರ ಜಿಲ್ಲೆಯ ಡೊಮನಾಳ ಗ್ರಾಮದವರಾದ ಡಾ. ಜಿ.ವಿ.ಕುಲಕರ್ಣಿ ಕವಿ, ನಾಟಕಕಾರ, ವಿಮರ್ಶಕ. ’ಜೀವಿ’ ಎಂಬ ಕಾವ್ಯ ನಾಮದಿಂದ ಬರೆಯುವ ಅವರು ಶಾಲಾ-ಕಾಲೇಜಿನ ದಿನಗಳಿಂದಲೂ 'ಮೆರಿಟ್ ಸ್ಕಾಲರ್ಶಿಪ್' ಪಡೆಯುತ್ತಿದ್ದ ವಿದ್ಯಾರ್ಥಿ. 'ಫೆಲೋಶಿಪ್' ಪಡೆದೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಕನ್ನಡ ಹಾಗೂ ಸಂಸ್ಕೃತ ಬಿ.ಎ. ಪದವಿಗಳನ್ನು ಗಳಿಸಿದರು. ನಂತರ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ ಪೂರ್ಣಗೊಳಿಸಿ ಮುಂಬೈಗೆ ತೆರಳಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಎಂ.ಎ, ಪಿಎಚ್.ಡಿ ಪಡೆದರು. ಬೊಂಬಾಯಿ ನಗರದ ಖಾಲ್ಸಾ ಮತ್ತು ಡಹಣೂಕರ್ ಚೀನಾಯ್ ಕಾಲೇಜುಗಳಲ್ಲಿ ಕನ್ನಡ-ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ...
READ MORE