ನಮ್ಮ ಕಿವಿ ವಿಷಯಾತುರ. ಅದು ಯಾವಾಗಲೂ ಸುತ್ತಮುತ್ತಲಿನ ಶಬ್ದವನ್ನು ಕೇಳಿಸಿಕೊಳ್ಳುವುದರಲ್ಲಿಯೇ ತಲ್ಲಿನವಾಗಿರುತ್ತದೆ. ನಮ್ಮ ಕಣ್ಣು ವಿಶ್ರಾಂತಿ ಪಡೆಯಬಹುದು; ಆದರೆ ಕಿವಿ ಹಾಗಲ್ಲ. ಅದು ಸದಾ ಕಾರ್ಯಶೀಲ. ಏನೆಲ್ಲಾ ಯಾವಾಗಲೂ ಕೇಳಿಸಿಕೊಳ್ಳುವ ನಮ್ಮ ಕಿವಿಗೆ 'ಶಬ್ದ' ಎಂದರೇನು, ಅದು ಹೇಗೆ ಕೇಳಿಸುತ್ತದೆ, ತನಗೊದಗಿದ ತೊಂದರೆ ಏನು, ಕಾರಣಗಳೇನು, ಪರಿಹಾರಗಳೇನು-ಎಂಬೆಲ್ಲ ಮಾತುಗಳನ್ನು ಕೇಳಿಸುವುದು ಬೇಡವೆ? ಇದು ಈ ಪುಸ್ತಕದ ಆಶಯವಾಗಿದೆ. ಶ್ರವಣ ಸಾಧನಗಳ ಅಭಿವೃದ್ಧಿಯಲ್ಲಿ ಎಂಜಿನಿಯರುಗಳ ಪಾತ್ರವೂ ಅಡಗಿದೆ. ಸಂಶೋಧನೆಯಲ್ಲಿ ತೊಡಗಿಕೊಂಡಾಗ ಮೂಲಭೂತ ವಿಷಯಗಳು ತಿಳಿದಿರಬೇಕಾಗುತ್ತದೆ. ಅದರ ಫಲವಾಗಿ ಬೆಳಕು ಕಂಡದ್ದೇ ಈ ಕಿರು ಪುಸ್ತಕ. ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾದ ಡಾ. ಶ್ರೀಧರ ಎಸ್. ಕುಂಟೋಜಿ ಮತ್ತು ಪ್ರೊ. ರಾಜಶೇಖರ ಅಲ್ಲೂರಕರ್ ( ಕುಕ್ಕುಂದಾ) ಅವರ ಈ ಪುಸ್ತಕವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಜನಪ್ರಿಯ ತಾಂತ್ರಿಕ ಶಿಕ್ಷಣ ಮಾಲೆಯಲ್ಲಿ ಪ್ರಕಟವಾಗಿದೆ. ವಿಶೇಷ ಚೇತನರಿಗೆ ಈ ಪುಸ್ತಕ ಒಂದು ಉತ್ತಮ ಕೊಡುಗೆಯಾಗಬಹುದು.
©2024 Book Brahma Private Limited.