ಜನರ ಆರೋಗ್ಯವರ್ಧನೆಗೆ ದಾರಿದೀಪವಾಗುವಂತಹ ಕೃತಿ ’ಆರೋಗ್ಯವೇ ಭಾಗ್ಯ”. ಮನುಷ್ಯರ ದಿನಚರಿಗಳು ಏರುಪೇರಾದಂತೆ ಆರೋಗ್ಯವು ಹದಗೆಡುತ್ತಾ ಬಂದಿದೆ. ಉತ್ತಮ ಜೀವನ ರೂಢಿಯನ್ನು ಅಳವಡಿಕೊಳ್ಳಲು ಸಾತ್ವಿಕ ಆಹಾರ, ವ್ಯಾಯಾಮಗಳ ಶಿಸ್ತು ಅತ್ಯಗತ್ಯವಾಗಿದ್ದು ಶಿಸ್ತುಬದ್ದ ಆಹಾರ, ದಿನಚರ್ಯೆ, ನಿದ್ದೆ ಅತ್ಯವಶ್ಯಕತೆ ಮತ್ತು ಮಾರ್ಗೋಪಾಯಗಳ ಬಗ್ಗೆ ಲೇಖಕರು ಈ ಪುಸ್ತಕದಲ್ಲಿ ತಿಳಿಸಿದ್ಧಾರೆ. ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪಾಲಿಸಬೇಕಾದ ನಿಯಮಗಳನ್ನು ನೇರವಾಗಿ ನಿರೂಪಿಸಲಾಗಿದೆ.
ಡಾ. ಟಿ.ಎಂ. ಶಿವಲಿಂಗಯ್ಯ ರವರು ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಕೊಟ್ಟೂರು ಪಟ್ಟಣದಲ್ಲಿ ಜನಿಸಿದವರು. ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ 1954-1958 ರವರೆಗೆ ಎಲ್.ಎ.ಎಂ.ಎಸ್. ವೈದ್ಯಕೀಯ ಪದವಿಯನ್ನು ಪಡೆದು, ಹೊಳೆಹೊನ್ನೂರು ಮತ್ತು ಶಿವಮೊಗ್ಗ ನಗರದಲ್ಲಿ ಎರಡೂ ಕಡೆ ``ಪ್ರಕಾಶ್ ಕ್ಲಿನಿಕ್’’ 1959 ಮೇನಿಂದ ನಡೆಸುತ್ತಿದ್ದರು. ಜೊತೆಯಲ್ಲಿ ಆಯುರ್ವೇದ ಔಷಧ ತಯಾರಿಕಾ ಘಟಕ ಪ್ರಕಾಶ್ ಫಾರ್ಮಸೂಟಿಕಲ್ಸ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದರು. ಔಷಧ ಗಿಡಮೂಲಿಕೆಗಳ ಸಂಶೋಧನೆಯಲ್ಲಿ ನಿರತರಾಗಿದ್ದು, ರಾಷ್ಟ್ರೀಯ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಅನೇಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಹಲವು ಉಪಯುಕ್ತ ವೈದ್ಯಕೀಯ ಲೇಖನಗಳನ್ನು ದಿನಪತ್ರಿಕೆ, ಮಾಸಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ...
READ MORE