ಡಾ. ವೀಣಾ ಎಸ್. ಭಟ್ ಅವರ ಕೃತಿ-ಬೊಜ್ಜಿಗಿದೆ ಪರಿಹಾರ. ದೇಹದ ಬೊಜ್ಜು -ಇಂದು ಹೆಣ್ಣು ಗಂಡೆನ್ನದೇ ಕಾಡುತ್ತಿರುವ ಸಮಸ್ಯೆ, ಬೊಜ್ಜು ಸಮಸ್ಯೆಗೆ ದೈಹಿಕ ಕಾರಣ ಮಾತ್ರವಲ್ಲ; ಮಾನಸಿಕ ಕಾರಣವೂ ಇದೆ. ಮನಸ್ಸಿನ ಒತ್ತಡ ಹೆಚ್ಚಿದಾಗಲೂ ಬೊಜ್ಜು ಸೇರಿಕೊಳ್ಳುತ್ತದೆ. ಇದರಿಂದ, ಹೃದಯದ, ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಬೊಜ್ಜು ದೇಹಕ್ಕೆ ಸೇರಿಕೊಳ್ಳದಂತೆ ನೋಡಿಕೊಳ್ಳಲು ಅಗತ್ಯವಾದ ಸಲಹೆಗಳನ್ನು ಲೇಖಕಿ ನೀಡಿದ್ದಾರೆ.ಡಾ. ವಸುಂಧರಾ ಭೂಪತಿ ಅವರು ಕೃತಿಯನ್ನು ಸಂಪಾದಿಸಿದ್ದಾರೆ.
ವೀಣಾ ಎಸ್. ಭಟ್ ಅವರು ಸ್ತ್ರೀರೋಗ ತಜ್ಞರು.ಭದ್ರಾವತಿಯ ಐಎಂಎ ಮಹಿಳಾ ಆರೋಗ್ಯ ವೇದಿಕೆ ಅಧ್ಯಕ್ಷರು, ಕೃತಿಗಳು: ಬೊಜ್ಜಿಗಿದೆ ಪರಿಹಾರ (ಬೊಜ್ಜು ಕರಗಿಸಲು ಸಜ್ಜಾಗೋಣ) ...
READ MORE