ಶಿಶುಗಳಿಂದ ಮಕ್ಕಳು ದೊಡ್ಡವರಾಗುವವರೆಗೂ ಎದುರಾಗುವ ದೈಹಿಕ, ಮಾನಸಿಕ ಅನಾರೋಗ್ಯದ ವಿಚಾರಗಳನ್ನು ಒಳಗೊಂಡ ಬರಹಗಳಿವೆ. ನಮ್ಮ ಮಕ್ಕಳ ಜೀವನ ಶೈಲಿಯಲ್ಲಿ ನಾವು ಸಾಮಾನ್ಯ ಶಿಸ್ತನ್ನು ಅನುಸರಿಸಿದರೆ ಮುಪ್ಪಿನಲ್ಲಿ ಎದುರಾಗಬಹುದಾದ ಹಲವು ಬಗೆಯ ರೋಗಗಳನ್ನು ನಿವಾರಿಸಿಕೊಳ್ಳಬಹುದಾದ ಮಾಹಿತಿಯನ್ನು ಲೇಖಕರು ಹೆಕ್ಕಿ ನೀಡಿದ್ದಾರೆ.
ಮಕ್ಕಳ ಆರೋಗ್ಯ, ದೈಹಿಕ ಸದೃಢತೆ, ಅವರ ಹಾರ್ಮೋನು ಬದಲಾವಣೆಗೆ ಸಂದರ್ಭದಲ್ಲಿ ಆಗುವ ವೈಪರಿತ್ಯಗಳನ್ನುನೀಡಲಾಗಿದೆ. ಅವರ ಸೂಕ್ತ ಬೆಳವಣಿಗೆಗೆ ಬೇಕಾದ ಅಗತ್ಯ ಸಲಹೆಗಳು ಇಲ್ಲಿವೆ. ಈ ಕೃತಿಯನ್ನು ಲೇಖಕಿಯೂ ಆದ ವಸುಂಧರಾ ಭೂಪತಿ ಸಂಪಾದಿಸಿದ್ದಾರೆ.
ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ. ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...
READ MORE