ಹೃದಯದ ಕಥೆ ಮತ್ತು ವ್ಯಥೆ

Author : ವಿಜಯಲಕ್ಷ್ಮೀ ಬಾಳೇಕುಂದ್ರಿ

Pages 100

₹ 59.00




Year of Publication: 2016
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು ಬರೆದ ಕೃತಿ-ಹೃದಯದ ಕಥೆ ಮತ್ತು ವ್ಯಥೆ. ಸ್ವತಃ ಹೃದ್ರೋಗ ತಜ್ಞೆಯಾಗಿರುವ ಅವರು ಹೃದ್ರೋಗಗಳ ಕುರಿತು ಜನರಲ್ಲಿರುವ ತಪ್ಪು ಗ್ರಹಿಕೆಗಳು, ಹೃದ್ರೋಗಗಕ್ಕಿರುವ ಕಾರಣ, ಅವುಗಳಿಗೆ ಸೂಕ್ತ ಚಿಕಿತ್ಸೆ ಇತ್ಯಾದಿ ಕುರಿತು ಈ ಕೃತಿಯಲ್ಲಿ ಸರಳವಾಗಿ ವಿವರಿಸಿದ್ದಾರೆ.

About the Author

ವಿಜಯಲಕ್ಷ್ಮೀ ಬಾಳೇಕುಂದ್ರಿ
(06 August 1950)

ವೃತ್ತಿಯಲ್ಲಿ ವೈದ್ಯೆಯಾಗಿ, ವಿಶೇಷವಾಗಿ ಮಕ್ಕಳ ಹೃದಯತಜ್ಞೆಯಾಗಿ, ಬಡವರ ಬಗ್ಗೆ ಮಾನವೀಯತೆ, ಅನುಕಂಪದ ಗುಣಗಳನ್ನು ಹೊಂದಿರುವ, ಮನದಾಳದಲ್ಲಿ ಮೂಡುವ ಆರ್ದ್ರ ಭಾವಗಳಿಗೆ ಅಕ್ಷರ ರೂಪ ನೀಡುವ ಸಾಹಿತಿಯಾಗಿ ಓದುಗರ ಮನಸ್ಸನ್ನು ಸೆಳೆದಿರುವ ವಿಜಯಲಕ್ಷ್ಮಿ ಬಾಳೇಕುಂದ್ರಿಯವರು ಹುಟ್ಟಿದ್ದು 1950 ರ ಆಗಸ್ಟ್‌ 6ರಂದು ಬೆಳಗಾವಿಯಲ್ಲಿ. ತಂದೆ ಈಶ್ವರಪ್ಪ ಗುರುಸಿದ್ಧಪ್ಪ ಬಾಳೇಕುಂದ್ರಿ, ತಾಯಿ ಸಿದ್ದವ್ವ. ತಂದೆ ಮುಂಬಯಿ ವಿಶ್ವವಿದ್ಯಾಲಯದಿಂದ ಪಶುವೈದ್ಯಕೀಯದಲ್ಲಿ ಚಿನ್ನದ ಪದಕದೊಡನೆ ಪದವಿ ಪಡೆದಿದ್ದಲ್ಲದೆ ವೈಸ್‌ರಾಯ್‌ರವರಿಂದ ಪ್ರಶಸ್ತಿ ಪಡೆದ ಪ್ರತಿಭಾನ್ವಿತರು. ತಾಯಿಯ ತಂದೆ ರಾವಬಹದ್ದೂರ್ ವೈಜನಾಥ ಅನಗೋಳ್‌ರವರು ಬೆಳಗಾವಿಯ ಕೆ.ಎಲ್‌.ಇ. ಸೊಸೈಟಿಯ ಸಂಸ್ಥಾಪಕರಲ್ಲೊಬ್ಬರು, ಸುಶಿಕ್ಷಿತ, ಸುಸಂಸ್ಕೃತ ಮನೆತನ. ಪ್ರಾರಂಭಿಕ ಶಿಕ್ಷಣ ...

READ MORE

Related Books