ನಮ್ಮ ದೇಹಕ್ಕೆ ಸೌಂದರ್ಯವನ್ನು ತಂದುಕೊಡುವ ಅತಿದೊಡ್ಡ ಅಂಗವಾಗಿದೆ ಚರ್ಮ. ಚರ್ಮಕ್ಕೆ ಇದರದ್ದೇ ಆದ ಕಾರ್ಯಗಳಿರುತ್ತವೆ, ಈ ಕಾರ್ಯಗಳ ಕಾರಣಕ್ಕೆ ಬರುವ ಕಾಯಿಲೆಗಳೂ ಕೂಡ ಸಾಕಷ್ಟಿವೆ. ಚರ್ಮವು ವಯಸ್ಸಿನ ಸೂಚಕವೂ ಆಗಿರುವುದರಿಂದ ಚರ್ಮದ ಬಗ್ಗೆ ಜನರಿಗೆ ವಿಪರೀತ ಕಾಳಜಿ. ಇನ್ನು ಕೆಲವರು ಚರ್ಮದ ಬಗ್ಗೆ ವಿಪರೀತ ಕಾಳಜಿಯ ನೆಪದಲ್ಲಿ ಮಾಡುವ ಚಿಕಿತ್ಸೆಯು ಅವರನ್ನು ಮತ್ತಷ್ಟು ಕಾಯಿಲೆಗೆ ತುತ್ತಾಗುವಂತೆ ಮಾಡುತ್ತದೆ. ಕಾಳಜಿ ಅತಿಯಾಗಿ ಸೌಂದರ್ಯವರ್ಧಕಗಳ ಬಳಕೆ ಮಿತಿಮೀರುತ್ತಿರುವುದರಿಂದ ಹಾಗೂ ಹವಾಮಾನದಲ್ಲಾಗುವ ವೈಪರೀತ್ಯದಿಂದ ಚರ್ಮ ಹಲವಾರು ರೋಗಗಳಿಗೆ ಒಳಗಾಗುತ್ತದೆ. ಸಾಮಾನ್ಯ ಚರ್ಮರೋಗಗಳು, ಅವುಗಳಿಗೆ ಕಾರಣ, ಪರಿಹಾರ, ಮುನ್ನೆಚ್ಚರಿಕೆ ವಹಿಸಬೇಕಾದ ಬಗೆ, ತಡೆಗಟ್ಟುವ ರೀತಿ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಲೇಖಕ ಬಿ.ಆರ್.ಸುಹಾಸ್ ರವರು ಈ ಕೃತಿಯಲ್ಲಿ ಬೆಳಕು ಚೆಲ್ಲಿದ್ದಾರೆ.
ಬೆಂಗಳೂರಿನ ಎಂ.ಎಸ್.ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಪದವಿ ಪೂರೈಸಿದ ಡಾ. ಬಿ. ಆರ್ ಸುಹಾಸ್, 1976 ಜೂ. 26 ರಂದು ಬೆಂಗಳೂರಿನಲ್ಲಿ ಹುಟ್ಟಿದ್ದು. ಸದ್ಯ ನಂದಿನಿ ಲೇಔಟ್ ನಲ್ಲಿ ಖಾಸಗಿಯಾಗಿ ವೈದ್ಯ ವೃತ್ತಿಯಲ್ಲಿದ್ದಾರೆ. ಪ್ರವೃತ್ತಿಯಿಂದ ಬರಹಗಾರರು, ಗಾಯಕರು, ಛಾಯಾಚಿತ್ರಗ್ರಾಹಕರೂ ಆಗಿದ್ದಾರೆ. ಚರ್ಮದ ಕಾಯಿಲೆಗಳು, ಕಥಾಕೋಶ, ಆಯುರ್ವೇದ ಸಂಪೂರ್ಣ ಮಾರ್ಗದರ್ಶಿ, ಝೆನ್ ಕಥೆಗಳು, ಭಾರತದ ವನ್ಯಧಾಮಗಳು, ಚಾಣಕ್ಯ ನೀತಿ, ಕಿರಿಯ ಕಥಾ ಸರಿತ್ಸಾಗರ, ವಿಲಿಯಂ ಹಾರ್ವೆ, ಲೂಯಿಸ್ ಪಾಶ್ಚರ್ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ...
READ MORE