ಅಂಗಾಂಗ ದಾನ ಎನ್ನುವುದು ಮಹತ್ವದ ವಿಚಾರವಾದರೂ ಅದರ ಬಗೆಗೆ ಇರುವ ತಪ್ಪು ಕಲ್ಪನೆಗಳೇ ಹೆಚ್ಚು. ವ್ಯಕ್ತಿಯ ಮರಣದ ನಂತರ ಆತನ/ಆಕೆಯ ದೇಹ ಮತ್ತೊಬ್ಬ ವ್ಯಕ್ತಿಗೆ ಜೀವ ತುಂಬಬಲ್ಲದು. ಆದರೆ ಅಂಗಾಂಗದಾನ ಎರಡು ಮುಖ್ಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಮೊದಲನೆಯದು ಅದರ ಸುತ್ತ ಇರುವ ಮೂಢನಂಬಿಕೆ. ಮತ್ತೊಂದು ಅಂಗಾಂಗಗಳ ಕಳವಿನ ಆತಂಕ.
ಆದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅಂಗಾಂಗದಾನದ ಪೂರ್ವಾಪರವನ್ನೆಲ್ಲಾ ಕೃತಿಯಲ್ಲಿ ವಿವರಿಸಿದ್ದಾರೆ, ಮುಂಬೈನ ಬಾಬಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ನಲವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಎಮ್. ಎಸ್. ಎಸ್ ಮೂರ್ತಿ.