ಲೈಂಗಿಕ ಅಸಮತೋಲನ, ಶೀಘ್ರಸ್ಖಲನ, ನಿಮಿರು ದೌರ್ಬಲ್ಯ ಮುಂತಾದವುಗಳಿಗೆ ಆಯುರ್ವೇದದಲ್ಲಿ ಔಷಧೀಯ ಸಸ್ಯಗಳ ಚಿಕಿತ್ಸೆ ಇದೆ. ಅಲ್ಲದೇ ನಿರ್ದಿಷ್ಟ ಆಹಾರ ಪದಾರ್ಥಗಳ ಸೇವನೆಗಳ ಮೂಲಕ ಮತ್ತು ಸುತ್ತಲಿನ ವಾತಾವರಣದ ಆಪ್ಯಾಯತೆಯ ಮೂಲಕ ಲೈಂಗಿಕ ಸಾಮರ್ಥ್ಯವನ್ನು, ಲೈಂಗಿಕ ಸಮಸ್ಯೆಯನ್ನು ನಿಯಂತ್ರಿಸಿಕೊಳ್ಳಬಹುದು. ಈ ವಿಷಯಗಳನ್ನು ಆಯುರ್ವೇದದ ‘ವಾಜೀಕರಣ’ ವಿಭಾಗದಲ್ಲಿ ವಿವರವಾಗಿ ವಿವರಿಸಲಾಗಿದೆ. ಆದರೆ ಜನಸಾಮಾನ್ಯರಿಗೆ ವಾಜೀಕರಣದ ಸಂಕೀರ್ಣ ವಿಷಯಗಳು ಅರ್ಥವಾಗುವುದು ದೂರದ ಮಾತು. ಇಲ್ಲಿ ವಾಜೀಕರಣದ ವಿವರಗಳನ್ನು ಸಾಧ್ಯವಾದಷ್ಟು ಸರಳವಾಗಿ ಸಾಮಾನ್ಯ ಜನರಿಗೆ ಶೀಘ್ರವಾಗಿ ಮುಟ್ಟಿಸುವ ಕೆಲಸವನ್ನು ಡಾ. ವಸುಂಧರಾ ಭೂಪತಿ ಈ ಕೃತಿಯ ಮೂಲಕ ಮಾಡಿದ್ದಾರೆ. ಆಹಾರವು ಲೈಂಗಿಕತೆಯೆ ಮೇಲೆ ಯಾವ ರೀತಿ ಪರಿಣಾವವನ್ನು ಬೀರುತ್ತದೆ ಎಂಬೂದರ ಬಗ್ಗೆ ಮಾಹಿತಿಯನ್ನು ಒದಗಿಸಿದ್ದಾರೆ.
©2024 Book Brahma Private Limited.