ಮಕ್ಕಳು ಮನೆಗೆ ಮಾಣಿಕ್ಯ ಎಂದು ಹೇಳುವ ಸಮಾಜ ಮಕ್ಕಳಿಲ್ಲದವರನ್ನು ಸಮಾಜ ಮೂಲೆ ಗುಂಪು ಮಾಡುತ್ತದೆ. ತಿರಸ್ಕಾರದ ಮನೋಭಾವನೆಯಿಂದ ಕಾಣುತ್ತದೆ. ಇದರಿಂದಾಗಿ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗುತ್ತದೆ. ವೈದ್ಯಕೀಯ ರಂಗದ ಶೋಧನೆಗಳಿಂದ ಹಲವು ಬಂಜೆ ಮಹಿಳೆಯರು ಮಗುವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಹಜ ಗರ್ಭಧಾರಣೆ ವಿಫಲವಾದ ಸಂದರ್ಭದಲ್ಲಿ ’ಇನ್ ವಿಟ್ರೊ ಫರ್ಟಿಲೈಸೇಶನ್’ ಐವಿಫ್ ಎಂಬ ಹೊಸ ವಿಧಾನ ದಂಪತಿಗಳಲ್ಲಿ ಸಂತಸ ಮೂಡಿಸಿದೆ. ಐವಿಎಫ್ ಕುರಿತು ’ಭಾಭಾ ಪರಮಾಣು ಅನುಸಂಧಾನ ಕೇಂದ್ರ, ಮುಂಬಯಿ’ಯಲ್ಲಿ 40 ವರ್ಷ ಸೇವೆ ಸಲ್ಲಿಸಿರುವ ಲೇಖಕ ಎಸ್.ಎಸ್. ಮೂರ್ತಿ ವಿವರಗಳನ್ನು ನೀಡಿದ್ದಾರೆ.