ಕಾಮ ಅನ್ನೋದು ಮನುಷ್ಯನ ಆರೋಗ್ಯ ಹಾಗೂ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದಂತದು. ಆದರೆ ಪ್ರಸ್ತುತ ಸಮಾಜದಲ್ಲಿ ಕಾಮದ ಬಗ್ಗೆ ಮೌಢ್ಯ, ಅನರ್ಥ, ಕಂದಾಚಾರ, ವಿಕೃತಿಗಳು ಹೆಚ್ಚುತ್ತಿವೆ. ಆದ್ದರಿಂದ ಸಾಮಾನ್ಯ ಜನತೆಗೆ ಕಾಮದ ಬಗ್ಗೆ ನಿಜ ಸತ್ಯಾಂಶಗಳ, ವೈಜ್ಞಾನಿಕ ಸಂಗತಿಗಳ ಅರಿವು ಮೂಡಿಸುವುದು, ಈ ಸಮಯದ ಅನಿವಾರ್ಯ. ಈ ಉದ್ದೇಶದಿಂದ ಈ ಕೃತಿಯು ಪ್ರಮುಖವೆನಿಸಿಕೊಳ್ಳುತ್ತದೆ. ಈ ಕೃತಿಯು ಅಪ್ಪಟ ಕಾಮದ ಪ್ರಜ್ಞೆ ಹೆಚ್ಚಿಸುವುದರ ಜೊತೆಗೆ ಬದುಕಿಗೆ- ಜೀವನಕ್ಕೆ ಮತ್ತೊಂದು ದೃಷ್ಟಿಕೋನವನ್ನೂ ಹೊಸ ಅರಿವನ್ನೂ ಈ ಕೃತಿಯು ಮೂಡಿಸಬಲ್ಲದು ಎಂಬುದು ಡಾ.ಎಂ.ಎಸ್.ತಿಮ್ಮಪ್ಪ ಅವರ ಅಭಿಪ್ರಾಯ.
ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಜೆ.ಬಾಲಕೃಷ್ಣ ಅವರು ಕೃಷಿ ಸೂಕ್ಷ್ಮಜೀವಿ ಶಾಸ್ತ್ರದಲ್ಲಿ ಸ್ನಾತಕೊತ್ತರ ಹಾಗೂ ಕನ್ನಡ ಕೃಷಿ ವಿಜ್ಞಾನ ಸಾಹಿತ್ಯದ ಅಧ್ಯಾಯನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.ಕಾರ್‍ಟೋನಿಸ್ಟ್ ಆಗಿಯು ಗುರುತಿಸಿಕೊಂಡಿರುವ ಬಾಲಕೃಷ್ಣರವರ ಆಸಕ್ತಿಯ ಕ್ಷೇತ್ರಗಳು ಜೀವವೈವಿಧ್ಯದಷ್ಟೇ ವಿಸ್ತಾರವಾದವು. ವಿಜ್ಞಾನದಿಂದ ಮೊದಲ್ಗೊಂಡು ಸಾಹಿತ್ಯ,ಸೂಫಿ,ಝೆನ್,ತತ್ವದರ್ಶನದ ವರೆಗೂ ಅವರ ಜ್ಞಾನ ಹರಡಿಕೊಂಡಿದೆ. ...
READ MORE