ಡಾ. ಎಸ್.ಜೆ.ನಾಗಲೋಟಿಮಠ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಹೆಸರಾಂತ ವೈದ್ಯರು. ಜನಸಾಮಾನ್ಯರೊಂದಿಗೆ ಸಹಜವಾಗೇ ಬೆರೆಯುವ ಗುಣ ಇದ್ದರಿಂದ ಅವರು ಶ್ರೀ ಸಾಮಾನ್ಯನನ್ನು ಹಾಗೂ ಶ್ರೀ ಸಾಮಾನ್ಯ ರೋಗಿಗಳ ನಡೆ-ನುಡಿ-ವರ್ತನೆಗಳು ಸರಿಯಾಗೇ ಗುರುತಿಸುತ್ತಿದ್ದರು. ಕೆಲವೊಮ್ಮೆ ವೈದ್ಯರ ಊಹೆಗೂ ನಿಲುಕದಷ್ಟು ಗ್ರಾಮೀಣ ಮದ್ದುಗಳ ಬಗ್ಗೆ ಅವರಿಗೆ ಮಾಹಿತಿ ಸಿಗುತ್ತಿತ್ತು. ರೋಗಿಗಳಿಂದಲೂ ಅವರು ಕಲಿತಿದ್ದು ಬಹಳ ಹಾಗೂ ವೈದ್ಯರು ಕಲಿಯಬೇಕು ಎಂಬುದೂ ಅವರ ಆಶಯವಾಗಿತ್ತು. ಇಂತಹ ಸರಳ ಸಂಗತಿಗಳು ತಮ್ಮ ಅನುಭವದ ಮೂಲಕ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1998) ಹಾಗೂ ಕನ್ನಡ ವೈದ್ಯಸಾಹಿತ್ಯ ಪರಿಷತ್ತಿನ ‘ಕುವೆಂಪು ವೈದ್ಯಸಾಹಿತ್ಯ ಪ್ರಶಸ್ತಿ’( 1998) ಲಭಿಸಿದೆ.
ವೈದ್ಯಕೀಯ ಹಾಗೂ ವೈಜ್ಞಾನಿಕ ಬರೆಹಗಳಲ್ಲಿ ಡಾ. ಎಸ್.ಜಿ. ನಾಗಲೋಟಿಮಠ ಹೆಸರು ಚಿರಪರಿಚಿತ. ಮೂಲತಃ ಬಾಗಲಕೋಟೆ ಜಿಲ್ಲೆಯವರು. ಇವರು ಜನಿಸಿದ್ದು 1940 ಜುಲೈ 20ರಂದು. ತಂದೆ ಜಂಬಯ್ಯ. ತಾಯಿ ಹಂಪವ್ವ್. ಹುಬ್ಬಳ್ಳಿಯ ಕರ್ನಾಟಕ ವ್ಯದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯ ಪದವೀಧರರು. ಹುಬ್ಬಳ್ಳಿಯ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ನಂತರ ಕಿಮ್ಸ್ ನಿರ್ದೇಶಕರೂ ಹಾಗೂ ಕರ್ನಾಟಕ ವಿಜ್ಞಾನ ಪರಿಷತ್ತು ಮಾಜಿ ಅಧ್ಯಕ್ಷರೂ ಆಗಿದ್ದರು. ಕೃತಿಗಳು: ಮಾನವ ದೇಹದ ಮಿಲಿಟರಿ ಪಡೆ, ವೈದ್ಯಕೀಯ ಪ್ರಯೋಗಾಲಯ, ಸರ್ವಜ್ಞ ವಚನಗಳಲ್ಲಿ ಆರೋಗ್ಯ, ಪ್ಲಾಸ್ಟಿಕ್ ಸರ್ಜರಿ, ಪರಿಸರ ಮಾಲಿನ್ಯ, ವೈದ್ಯಕೀಯ ವಿಶ್ವಕೋಶ. ಪ್ರಶಸ್ತಿ- ಪುರಸ್ಕಾರಗಳು: ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ...
READ MORE