ದೇಹವನ್ನು ವೀಣೆಗೆ ಹೋಲಿಸುತ್ತಾ ತಮ್ಮ ನಿರೂಪಣೆಯನ್ನು ಪ್ರಾರಂಭಿಸುವ ವಸಂತ ಅ. ಕುಲಕರ್ಣಿ ಯವರು ಈ ವೀಣೆಯಲ್ಲಿ ಹೊಮ್ಮುವ ಅನಾರೋಗ್ಯ ಎಂಬ ಅಪಸ್ವರದ ಮೂಲ ಹಿಡಿದು ಓದುಗರನ್ನು ಆರೋಗ್ಯ ಜಾಗೃತಿಯ ಅಭಿಯಾನದಲ್ಲಿ ಅಲೆದಾಡಿಸಿ ಕರೆತರುತ್ತಾರೆ. ಸಂಗೀತ ಚಿಕಿತ್ಸೆ, ಆರೋಗ್ಯದ ಮೇಲೆ ಮಾನವೀಯ ಸಂಬಂಧಗಳ ಪ್ರಭಾವ, ನಗುವಿನ ಪ್ರಭಾವ, ಯೋಗದ ಅವಶ್ಯಕತೆ ಹೀಗೆ ಹಲವಾರು ವೈವಿಧ್ಯಮಯ ವಿಷಯಗಳನ್ನು ಸಾಹಿತ್ಯಿಕವಾಗಿ ಈ ಕೃತಿಯೂ ನಿರೂಪಿಸುತ್ತದೆ. ಈ ರೀತಿಯಾಗಿ ರಚನೆ ಮಾಡಿರುವ ಈ ಕೃತಿಯನ್ನು ಲೇಖಕರು ಇದನ್ನೊಂದು ವೈದ್ಯಕೀಯ ಶುಷ್ಕ ಕೃತಿಯಾಗಲು ಬಿಡದೆ, ಸಮೃದ್ಧ ಓದಿನ ಕೌತುಕವನ್ನು ಕಟ್ಟಿಕೊಡುವ ಮೂಲಕ ಓದುಗರಿಗೆ ತಲುಪವಂತೆ ಮಾಡಿದ್ದಾರೆ.
ವೃತ್ತಿಯಿಂದ ವೈದ್ಯರು ಮತ್ತು ಪ್ರವೃತ್ತಿಯಿಂದ ವೈದ್ಯ ಸಾಹಿತಿಗಳೂ ಆದ ಅನಂತ ಕುಲಕರ್ಣಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿಯವರು. ಮಹಾತ್ಮ ಗಾಂಧಿ ಅವರಿಗೆ ನಿಕಟವರ್ತಿಯಾಗಿದ್ದ ತಂದೆ ಅನಂತರಾವ ಪ್ರಸಿದ್ಧ ವಕೀಲರು ತಾಯಿ ಲಕ್ಷ್ಮೀಬಾಯಿಯವರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದವರು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಅಥಣಿಯಲ್ಲಿ ಪಡೆದ ಅವರು ಹುಬ್ಬಳ್ಳಿಯ ಕೆ.ಎಂ.ಸಿ.ಯಲ್ಲಿ ಎಂ.ಬಿ.ಬಿ.ಎಸ್. ಹಾಗೂ ಮಿರಜದ ಜಿ.ಎಂಸಿಯಲ್ಲಿ ಎಂ.ಡಿ. ಮುಗಿಸಿದರು. ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜ, ಬಿ.ಎಲ್.ಡಿ.ಇ. ಮೆಡಿಕಲ್ ಕಾಲೇಜ್, ರಾಜರಾಜೇಶ್ವರಿ ಮೆಡಿಕಲ್ ಕಾಲೇಜುಗಳಲ್ಲಿ ನಿರಂತರ ವೈದ್ಯ ಶಿಕ್ಷಣದಲ್ಲಿ ನಿರಂತರ ೪೫ ವರುಷಗಳ ಸೇವೆ-ಪ್ರಾಧ್ಯಾಪಕ ಹಾಗೂ ...
READ MORE