ರಕ್ತದ ಏರೊತ್ತಡ-ಈ ಕೃತಿಯು ಡಾ. ಪ್ರಕಾಶ್ ಸಿ. ರಾವ್ ಅವರು ರಚಿಸಿದ್ದಾರೆ. ಅಪಾಯದ ಗಂಟೆ ಬಾರಿಸುತ್ತಿರುವ ರೋಗ ಎಂಬುದಾಗಿ ಈ ಕೃತಿಗೆ ಲೇಖಕರು ಉಪಶೀರ್ಷಿಕೆ ನೀಡಿದ್ದಾರೆ. ಜಗತ್ತಿನ ಬಹುತೇಕ ಜನರು ರಕ್ತದ ಏರೊತ್ತಡದಿಂದ ಬಳಲುತ್ತಿದ್ದಾರೆ ಎಂಬುದು ವೈದ್ಯಕೀಯ ವರದಿಗಳು ಹೇಳುತ್ತಿದ್ದು, ಅಪಾಯದ ಗಂಟೆ ಬಾರಿಸುತ್ತಿದೆ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ರಕ್ತದೊತ್ತಡವು ಕೇವಲ ದೈಹಿಕ ಕಾಯಿಲೆಯಲ್ಲ; ಅದರ ಮೂಲ ಮನೋಒತ್ತಡದಲ್ಲಿಯೂ ಇದೆ. ಆದ್ದರಿಂದ, ರಕ್ತದೊತ್ತಡ ಇರುವ ರೋಗಿಗಳಿಗೆ ಔಷಧಿಗಳಿಗಿಂತ ಸೂಕ್ತ ಆಪ್ತ ಸಮಾಲೋಚನೆ ನೀಡುವುದು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ,, ರೋಗದ ಮಾಹಿತಿ, ರಕ್ತದೊತ್ತಡಗಳನ್ನು ತಡೆಯುವ ಬಗೆ, ಮುಂಜಾಗ್ರತೆ ಕ್ರಮಗಳು ಇತ್ಯಾದಿ ಚಿಂತನೆಗಳನ್ನು ಒಳಗೊಂಡ ಕೃತಿ ಇದು.
ಲೇಖಕ ಪ್ರಕಾಶ್ ಸಿ ರಾವ್ ಅವರು ಬೆಂಗಳುರಿನ ಯಶವಂತಪುರದಲ್ಲಿ ಖಾಸಗಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ನಿಮ್ಹಾನ್ಸ್‌ನಲ್ಲಿ ಮಾನಸಿಕ ರೋಗದ ಬಗ್ಗೆ ವಿಶೇಷ ತರಬೇತಿ ಪಡೆದಿದ್ದಾರೆ. ಈ ಮಧ್ಯೆ, ಸೌದಿ ಅರೇಬಿಯಾದ ಸರಕಾರಿ ಆಸ್ಪತ್ರೆಯಲ್ಲಿ ಐದು ವರ್ಷ ಕೆಲಸ ಮಾಡಿದ್ದರು. ಇವರಿಗೆ ವಿಜ್ಞಾನ, ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ಆಸಕ್ತಿ. ತಮ್ಮ ವೃತಿಯಲ್ಲಿ ಬಿಡುವು ಮಾಡಿಕೊಂಡು ಹಲವಾರು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ರೇಡಿಯೋ, ಟಿ. ವಿ.ಗಳಲ್ಲಿ ಆರೋಗ್ಯ ವಿಷಯಗಳ ಮೇಲೆ ಕಾರ್ಯಕ್ರಮ ನೀಡಿದ್ದಾರೆ. ದೈನಿಕ ಹಾಗೂ ವಾರಪತ್ರಿಕೆಗಳಲ್ಲಿ ನೂರಾರು ಆರೋಗ್ಯ ಲೇಖನಗಳನ್ನು ಬರೆದಿದ್ದಾರೆ. ಕೃತಿಗಳು: ಜನಾರೋಗ್ಯದ ...
READ MORE