ಡಾ. ಪಿ.ಎಸ್. ಶಂಕರ ಅವರ ಕೃತಿ-ಕ್ಯಾನ್ಸರ್. ಏನೆಲ್ಲಾ ಸಂಶೋಧನೆಗಳು ನಡೆಯುತ್ತಿದ್ದರೂ ವಿವಿಧ ಪ್ರಕಾರಗಳ ಕ್ಯಾನ್ಸರ್ ರೋಗಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಕ್ಯಾನ್ಸರ್ ಬಂದರೆ ಸಾವು ಖಚಿತ ಎಂಬ ಭಾವನೆ ಬಲವಾಗುತ್ತಿದೆಯಾದರೂ ರೋಗದ ತೀವ್ರತೆಯನ್ನು ಕಡಿಮೆ ಮಾಡುವಷ್ಟು ವೈದ್ಯಕೀಯ ಚಿಕಿತ್ಸೆ ಬೆಳೆದಿದೆ. ಆದರೆ, ರೋಗ ಸಂಪೂರ್ಣ ಗುಣವಾಗುತ್ತಿಲ್ಲ. ಹೀಗಾಗಿ, ಇಂತಹ ಮಾರಕ ಕ್ಯಾನ್ಸರ್ ಎಂದರೇನು? ಇದಕ್ಕೆ ಕಾರಣಗಳೇನು? ಮುಂಜಾಗ್ರತೆ ಕ್ರಮಗಳೇನು? ಕ್ಯಾನ್ಸರ್ ವಿವಿಧ ಹಂತಗಳು, ಇತ್ಯಾದಿ ಕುರಿತು ಮಾಹಿತಿ ನೀಡುವ ಕೃತಿ ಇದು.
ವೃತ್ತಿಯಲ್ಲಿ ವೈದ್ಯರಾಗಿ ವೈದ್ಯ ಸಾಹಿತಿಯಾಗಿ ಪ್ರಸಿದ್ಧರಾಗಿರುವ ಡಾ.ಪಿ.ಎಸ್.ಶಂಕರ್ ಅವರು 1936 ಜನವರಿ 1ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿಯಲ್ಲಿ ಜನಿಸಿದರು. ಹುಟ್ಟೂರು ಹಾಗೂ ಚಿತ್ರದುರ್ಗದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ಮತ್ತು ದೆಹಲಿಯಲ್ಲಿ ವೈದ್ಯಕೀಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಲಬುರ್ಗಿಯ ಎಂ.ಆರ್. ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ವೃದ್ಧಾಪ್ಯದಲ್ಲಿನ ಕಾಯಿಲೆಗಳು, ಹೃದಯ ಜೋಪಾನ, ಕ್ಯಾನ್ಸರ್, ಹೃದಯ ರೋಗ ತಡೆಗಟ್ಟಿ, ಡಾ. ವಿಕ್ರಂ ಸಾರಾಭಾಯ್, ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ರಾಕ್ ಫೆಲ್ಲರ್ ಸ್ಕಾಲರ್ ಇನ್ ರೆಸಿಡೆನ್ಸ ಗೌರವ, ಭಾರತ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ...
READ MORE