ಗರ್ಭ ಹೇಗೆ ನಿಲ್ಲುತ್ತದೆ, ಹೇಗೆ ಬೆಳೆಯುತ್ತದೆ, ನಿಂತಾಗ ಏನು ಮಾಡಬೇಕು ಏನು ಮಾಡಬಾರದು, ಹೆರಿಗೆ ಹೇಗೆ ಆಗುತ್ತದೆ, ನಂತರ ಬಾಣಂತಿ ಹೇಗಿರಬೇಕು, ಶಿಶುವಿನ ಆರೈಕೆ ಹೇಗಿರಬೇಕು ಎಂಬ ಮೂಲಭೂತ ಸಂಗತಿಗಳ ಬಗ್ಗೆ ವಿವರಗಳನ್ನು ಡಾ ಸುನಂದ ರಾ. ಕುಲಕರ್ಣಿ ಈ ಕೃತಿಯಲ್ಲಿ ಒದಗಿಸಿದ್ದಾರೆ. ತಮ್ಮ ಅನುಭವವನ್ನು ಕೂಡ ಈ ಕೃತಿಯಲ್ಲಿ ಬಣ್ಣಿಸಿದ್ದಾರೆ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಗರ್ಭಿಣಿ ಮತ್ತು ಬಾಣಂತಿಯ ಆರೈಕೆಯಿಂದ ಮೊದಲ್ಗೊಂಡು ಬಾಣಂತಿಯ ಸನ್ನಿ, ಸಿಝೇರಿಯನ್, ಚಿಮ್ಮಟಗಳ ಹೆರಿಗೆ, ಕುಟುಂಬ ಯೋಜನೆಗಳಂತಹ ಮಹತ್ವದ ವಿಷಯಗಳ ಬಗ್ಗೆಯೂ ಮಾಹಿತಿಯನ್ನು ಈ ಕೃತಿಯೂ ಒದಗಿಸುತ್ತದೆ.
©2024 Book Brahma Private Limited.