ಮೂರ್ಚೆರೋಗದ ಬಗ್ಗೆ ಜನಸಾಮಾನ್ಯರಲ್ಲಿ ಅನೇಕ ತಪ್ಪು ತಿಳಿವಳಿಕೆಗಳಿವೆ. ಅಪಸ್ಮಾರ ಕುರಿತಂತೆ ಸಾಮಾಜಿಕ ಮೌಢ್ಯ ಬೇರೂರಿದೆ. ಮೂರ್ಚೆ ರೋಗದಿಂದ ಬಳಲುವ ವ್ಯಕ್ತಿ ಮಾತ್ರವಲ್ಲ ಇಡೀ ಕುಟುಂಬ ಆತಂಕದಿಂದ ಬದುಕುತ್ತಿರುತ್ತದೆ. ಅದರಲ್ಲೂ ಹೆಣ್ಣುಮಕ್ಕಳಲ್ಲಿ ಅಪಸ್ಮಾರ ತಂದೊಡ್ಡುವ ಸಂಗತಿಗಳು ಬದುಕಿನ ಬುಡವನ್ನೇ ಅಲುಗಾಡಿಸಿ ಬಿಡುವಂತಹವು. ಇಂತಹ ಸಾಮಾಜಿಕ ಆರೋಗ್ಯದ ಪಿಡುಗಿನ ಬಗ್ಗೆ ಈ ಕೃತಿ ಹಲವಾರು ಮಹತ್ವದ ವಿಚಾರಗಳ ಬೆಳಕು ಚೆಲುತ್ತದೆ. ಅಪಸ್ಮಾರದ ವಿಧಗಳು, ಕಾರಣಗಳು, ಬೇಕಾದ ಚಿಕಿತ್ಸೆ ಅದರಲ್ಲೂ ಮುಖ್ಯವಾಗಿ ಪ್ರಥಮ ಚಿಕಿತ್ಸೆ ಬಗ್ಗೆ ವಿವರವಾಗಿ ತಿಳಿಸಲಾಗಿದೆ.
©2024 Book Brahma Private Limited.