ನರ ಮತ್ತು ಮಿದುಳಿಗೆ ಸಂಬಂಧಿಸಿದ ಅನೇಕ ಕಾಯಿಲೆಗಳ ಬಗ್ಗೆ ಅನೇಕ ಮಾಹಿತಿಗಳು ಅಲಭ್ಯವಿದೆ. ಆದರೆ, ಇವೆರಡು ತುಸು ಏರುಪೇರಾದರೂ, ಮನುಷ್ಯ ಜೀವನವನ್ನು ಜರ್ಜರಿತಗೊಳಿಸುತ್ತವೆ. ಪಾಶ್ರ್ವವಾಯು, ಬೆಲ್ಸ್ಪಾಲ್ಸಿ, ಸರ್ಪ ಸುತ್ತು, ಪಾರ್ಕಿನ್‍ಸನ್ಸ್, ಡಿಮೆನ್ಷಿಯಾ ಮುಂತಾದ ಕಾಯಿಲೆಗಳಲ್ಲಿ ಆರಂಭದ ರೋಗಪತ್ತೆ ಎಷ್ಟು ಮುಖ್ಯವಾಗುತ್ತದೆ ಎಂಬುದನ್ನು ತಿಳಿಸುವುದರೊಂದಿಗೆ ಅದರ ಚಿಕಿತ್ಸೆ, ಕುಟುಂಬದವರ ಆರೈಕೆ, ಆಪ್ತಸಲಹೆ ಕುರಿತು ಸಮಗ್ರ ಮಾಹಿತಿಯನ್ನು ಈ ಕೃತಿ ಒದಗಿಸುತ್ತದೆ.
ಮೆದುಳು, ಇಡೀ ಶರೀರದಲ್ಲಾಗುವ ಸೂಕ್ಷ್ಮ ಬದಲಾವಣೆಗಳ ಬಗ್ಗೆ ನಾವು ಗಮನಹರಿಸಬೇಕಾಗಿರುವ ಹಲವು ಮುಖ್ಯ ಸಂಗತಿಗಳ ಕುರಿತು ಇಲ್ಲಿ ಓದುಗರ ಗಮನ ಸೆಳೆಯಲಾಗಿದೆ.
ವೈದ್ಯಕೀಯ ಸಾಹಿತ್ಯ ರಂಗ, ಭರತನಾಟ್ಯ ಕಲಾವಿದೆಯಾಗಿ ಹೆಸರು ಗಳಿಸಿರುವ ಪವಿತ್ರಾ ಕೆ.ಎಸ್ ಅವರು ಮೂಲತಃ ಶಿವಮೊಗ್ಗದವರು. ಆರೋಗ್ಯ ಸಲಹೆಗಳಿಂದ ಉನ್ನತ ಸ್ಥಾನ ಗಳಿಸಿರುವ ಅವರು ವಿಚಾರ ಸಾಹಿತ್ಯದಲ್ಲೂ ಆಸಕ್ತರು. 11ನೇ ವಯಸ್ಸಿನಲ್ಲಿ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಉಪಾಧ್ಯಕ್ಷೆಯಾಗಿದ್ದ ಕೀರ್ತಿ ಅವರದು. ’ಮನ-ಮನನ, ನೀವು ಮತ್ತು ನಿಮ್ಮ ಸಂಬಂಧಗಳು, ಸಿ.ಜಿ.ಯೂಂಗ್, ಓ ಸಖಿ ನೀನು ಸಖಿಯೆ, ಪರಿಪೂರ್ಣ ವ್ಯಕ್ತಿತ್ವ ಇಂದಿನ ಮಹಿಳೆಯ ಮಾನಸಿಕ ಸವಾಲುಗಳು, ಗೀಳು ಖಾಯಿಲೆ, ಮಗು-ಮನಸು’ ಅವರ ಕೃತಿಗಳು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ, ಕಸಾಪ ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿ ...
READ MORE