ಲೇಖಕ ಕಿರಣ್ ವಿ. ಸೂರ್ಯ ಅವರ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟ ಕೃತಿ ʻನಿರಾಮಯ: ವೈದ್ಯಕೀಯ ಇತಿಹಾಸದ ಚಿತ್ರ-ಪಯಣʼ. ಕೆಲವು ಅಪರೂಪದ ಚಿತ್ರಕಲಾಕೃತಿಗಳ ಮೂಲಕ ಜಗತ್ತಿನ ವೈದ್ಯಕೀಯ ಪದ್ದತಿಗಳು ಬೆಳೆದುಬಂದ ದಾರಿಯನ್ನು ವಿವರಿಸುತ್ತದೆ. ವೈದ್ಯಕೀಯ ಲೋಕಕ್ಕೆ ವಿಜ್ಞಾನದ ಕೊಡುಗೆ, ಅಲೋಪತಿ, ಅರಿವಳಿಕೆ ಶಸ್ತ್ರಚಿಕಿತ್ಸೆ, ಲಸಿಕೆಗಳ ಪ್ರಯೋಗ ಮುಂತಾದ ಹಲವಾರು ವಿಚಾರಗಳು, ಅವುಗಳ ಬೆಳವಣಿಗೆ ಕುರಿತಾದ ಮಾಹಿತಿಪೂರ್ಣ ವಿಚಾರಗಳನ್ನು ಈ ಕೃತಿ ಒಳಗೊಂಡಿದೆ. ಗಂಭೀರ ವಿಷಯಗಳ ಜೊತೆ ಪ್ರೀತಿಯಲ್ಲಿ ಬೀಳುವುದೂ ಒಂದು ಕಾಯಿಲೆ ಎಂಬ ಸಂಗತಿಯನ್ನೂ ಹಾಸ್ಯ ಸಂದರ್ಭಗಳ ಮೂಲಕ ಲೇಖಕರು ವಿವರಿಸುವುದು ಕೃತಿಯ ವಿಶೇಷ.
ಡಾ. ಕಿರಣ್ ವಿ. ಸೂರ್ಯ ಅವರು ವೃತ್ತಿಯಿಂದ ವೈದ್ಯರು, ಪ್ರವೃತ್ತಿಯಿಂದ ವಿಜ್ಞಾನ ವಿಷಯಗಳ ಲೇಖಕರು. ವಿಜ್ಞಾನವನ್ನು ಸರಳವಾಗಿ, ಕುತೂಹಲ ಮೂಡಿಸುವ ಶೈಲಿಯಲ್ಲಿ ಪ್ರಸ್ತುತಪಡಿಸುತ್ತಾ ಬಂದಿದ್ದು, ಅವುಗಳು ಕನ್ನಡದ ಹಲವಾರು ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಕರ್ನಾಟಕ ವಿಜ್ಞಾನ ಪರಿಷತ್ ನಿಂದ ಇವರ ʻಮಾನವ ಶರೀರದ ರಕ್ಷಣಾ ವ್ಯವಸ್ಥೆʼ ಕೃತಿಗೆ ʻಅತ್ಯುತ್ತಮ ಹಸ್ತಪ್ರತಿ ಪ್ರಶಸ್ತಿʼ ಲಭಿಸಿದೆ. ವೈದ್ಯಕೀಯ ಜಗತ್ತಿನಲ್ಲಿ ಸಂಭವಿಸಿದ ಆಕಸ್ಮಿಕ ಘಟನೆಗಳ ಕುರಿತು ಹೇಳುವ ಇವರ ʻಸೆರೆಂಡಿಪಿಟಿʼ ಪುಸ್ತಕಕ್ಕೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ʻಅತ್ಯುತ್ತಮ ವೈದ್ಯಕೀಯ ಕೃತಿʼ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪುಸ್ತಕ ...
READ MORE