‘ಅಂದದ ಆರೋಗ್ಯಕ್ಕೆ ಆಪ್ತವೈದ್ಯ’ ಡಾ.ಕೆ. ಪೂರ್ಣಿಮಾ ಕೋಡೂರು ಅವರ ಲೇಖನ ಸಂಕಲನ. ನಮಗೆ ಬರುವ ಕಾಯಿಲೆಗೆ ನಾವು ಸೂಕ್ತ ಚಿಕಿತ್ಸೆ ಕೊಡೆಸಿಕೊಳ್ಳುತ್ತೇವೆ. ಅದು ವಾಸಿಯಾಯಿತಾ, ಅಷ್ಟಕ್ಕೇ ಸುಮ್ಮನಾಗುತ್ತೇನೆ. ಹೀಗೆ ಸುಮ್ಮನಾಗುವ ಬದಲು, ನಮಗೆ ಬಂದ ಕಾಯಿಲೆಯೇನು, ಅದು ಯಾಕೆ ಬಂತು, ಇದರ ಹಿಂದಿನ ಕಾರಣವೇನು, ನಾವೇ ಇದಕ್ಕೆ ಆರಂಭಿಕ ಚಿಕಿತ್ಸೆ ಎಂದೇನಾದರೂ ಮಾಡಿಕೊಳ್ಳಬಹುದಾ, ಇದನ್ನು ನಾವು ವೈದ್ಯರಷ್ಟು ತಿಳಿದುಕೊಳ್ಳದೇ ಹೋದರೂ, ನಮ್ಮ ಮಟ್ಟದಲ್ಲಿ ನಾವೊಂದಿಷ್ಟು ತಿಳಿದುಕೊಂಡರೆ ಒಳ್ಳೆಯದೇ ಅಲ್ಲವಾ, ಹೀಗೆ ತಿಳಿದುಕೊಂಡಾಗ, ಯಾವುದೇ ಕಾಯಿಲೆಯ ವಿಷಯದಲ್ಲಿ ನಾವು ವಿನಾಕಾರಣ ಗಾಬರಿ ಬೀಳುವುದು ತಪ್ಪುತ್ತದೆ. ಆಯುರ್ವೇದ ವೈದ್ಯರಾಗಿ ಮತ್ತು ವೈದ್ಯ ಸಾಹಿತಿಯಾಗಿ ಖ್ಯಾತಿ ಗಳಿಸಿರುವ ಡಾ.ಕೆ. ಪೂರ್ಣಿಮಾ ಕೋಡೂರು ಅವರು ಈ ಹಿನ್ನೆಲೆಯಿಟ್ಟುಕೊಂಡು, ಎಲ್ಲರಿಗೂ ಉಪಯುಕ್ತವಾಗುವಂತೆ ಬರೆದಿರುವ ಲೇಖನಗಳ ಒಟ್ಟು ಸಂಕಲನವೇ ಅಂದದ ಆರೋಗ್ಯಕ್ಕೆ ಆಪ್ತ ವೈದ್ಯ.
ಆಯುರ್ವೇದ ವೈದ್ಯರು ಮತ್ತು ವೈದ್ಯ ಸಾಹಿತಿಯೂ ಆಗಿರುವ ಡಾ.ಕೆ.ಪೂರ್ಣಿಮಾ ಕೋಡೂರು ಅವರು ಆಯುರ್ವೇದವನ್ನು ಪ್ರಚುರ ಪಡಿಸಬೇಕು ಹಾಗೂ ಸರಳವಾಗಿ ಈ ಬಗ್ಗೆ ಕನ್ನಡದಲ್ಲಿ ಜನರಿಗೆ ತಿಳಿಸಬೇಕು ಎನ್ನುವ ಉದ್ದೇಶದಿಂದ ಈವರೆಗೆ ಪ್ರಜಾವಾಣಿ, ವಿಜಯ ಕರ್ನಾಟಕ, ವಿಜಯ ಟೈಮ್ಸ್, ತರಂಗ, ಪ್ರಿಯಾಂಕ, ಗೃಹಶೋಭಾ ಸೇರಿದಂತೆ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಬರೆದ ಲೇಖನಗಳ ಸಂಖ್ಯೆ 300ನ್ನೂ ಮೀರುತ್ತದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮದಲ್ಲಿ ‘ಆವಿ ಆಯುರ್ವೇದಿಕ್ ಹೆಲ್ತ್ ಹೋಮ್’ ಎನ್ನುವ ಆಯುರ್ವೇದಿಕ್ ಕ್ಲಿನಿಕ್‌ನ್ನು ನಡೆಸುತ್ತಿರುವ ಇವರು ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಸೇರಿದಂತೆ ಹಲವು ಸಮಾಜ ...
READ MORE