ರೋಗಿ ಮತ್ತು ವೈದ್ಯರ ನಡುವೆ ನಡೆಯುವ ಹಲವು ಸಂಭಾಷಣೆಗಳು, ಸನ್ನಿವೇಶಗಳು ಹಾಸ್ಪಾಸ್ಯದವಾಗಿರುತ್ತದೆ. ರೋಗಿಗಳ ಸುತ್ತಲೇ ತನ್ನ ಅಸ್ತಿತ್ವ ಕಂಡುಕೊಳ್ಳುವ ವೈದ್ಯಕೀಯ ಕ್ಷೇತ್ರವು ವಾಸ್ತವದಲ್ಲಿ ಸಾಕಷ್ಟು ನಗು ಹುಟ್ಟಿಸುವ ಅವಕಾಶವನ್ನು ತನ್ನೊಳಗೆ ಕಲ್ಪಿಸಿಕೊಂಡಿವೆ. ರೋಗದ ವೈಜ್ಞಾನಿಕ ಆಯಾಮದ ಕುರಿತು ರೋಗಿ ಹಾಗೂ ರೋಗಿಯ ಸಂಬಂಧಿಕರಿಗೆ ಇರುವ ಮುಗ್ಧ ಅಜ್ಞಾನ, ಅವರ ಮುಗ್ದತೆ ,ಇದೇರೀತಿ ಕೆಲವೊಮ್ಮೆ ವೈದ್ಯರಾದವರಿಗೆ ರೋಗಿಯ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಇರುವ ಅಪಕಲ್ಪನೆಗಳು ಇಂತಹ ಹಾಸ್ಯಕ್ಕೆ ಮೂಲ ಕಾರಣವಾಗಿರುತ್ತದೆ. ತಮ್ಮ ವೃತ್ತಿ ಜೀವನದಲ್ಲಿ ನಡೆದ ಹಲವು ಹಾಸ್ಯ ಸನ್ನಿವೇಶಗಳನ್ನು, ಅಷ್ಟೇ ಸೊಗಸಾಗಿ ಹಾಸ್ಯ ಧಾಟಿಯಲ್ಲಿ ಲೇಖಕ ಕೆ.ಪಿ. ಪುತ್ತೂರಾಯರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.