ಲೇಖಕ ಡಾ. ಬಿ.ಆರ್ ಸುಹಾಸ್ ಅವರ ಕೃತಿ-ದೇಹಾರೋಗ್ಯದ ಕನ್ನಡಿ ಚರ್ಮ. ಮನುಷ್ಯನ ದೇಹದ ಚರ್ಮವು ಆರೋಗ್ಯ ಹಾಗೂ ಅನಾರೋಗ್ಯದ ಗುಣಲಕ್ಷಣಗಳನ್ನು ಸೂಚಿಸುತ್ತದೆ. ನಮ್ಮ ದೇಹವು ಆರೋಗ್ಯವಾಗಿದೆಯೇ ಇಲ್ಲವೇ ಎಂಬುದನ್ನು ಪೂರ್ವಭಾವಿಯಾಗಿ ತಿಳಿಯಬಹುದು. ಇಂತಹ ಕುತೂಹಲಕಾರಿ ಹಾಗೂ ವೈದ್ಯಕೀಯ ಸಂಗತಿಗಳನ್ನು ಲೇಖಕರು ಸರಳವಾಗಿ ವಿವರಿಸಿರುವ ಕೃತಿ ಇದು.
ಬೆಂಗಳೂರಿನ ಎಂ.ಎಸ್.ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಪದವಿ ಪೂರೈಸಿದ ಡಾ. ಬಿ. ಆರ್ ಸುಹಾಸ್, 1976 ಜೂ. 26 ರಂದು ಬೆಂಗಳೂರಿನಲ್ಲಿ ಹುಟ್ಟಿದ್ದು. ಸದ್ಯ ನಂದಿನಿ ಲೇಔಟ್ ನಲ್ಲಿ ಖಾಸಗಿಯಾಗಿ ವೈದ್ಯ ವೃತ್ತಿಯಲ್ಲಿದ್ದಾರೆ. ಪ್ರವೃತ್ತಿಯಿಂದ ಬರಹಗಾರರು, ಗಾಯಕರು, ಛಾಯಾಚಿತ್ರಗ್ರಾಹಕರೂ ಆಗಿದ್ದಾರೆ. ಚರ್ಮದ ಕಾಯಿಲೆಗಳು, ಕಥಾಕೋಶ, ಆಯುರ್ವೇದ ಸಂಪೂರ್ಣ ಮಾರ್ಗದರ್ಶಿ, ಝೆನ್ ಕಥೆಗಳು, ಭಾರತದ ವನ್ಯಧಾಮಗಳು, ಚಾಣಕ್ಯ ನೀತಿ, ಕಿರಿಯ ಕಥಾ ಸರಿತ್ಸಾಗರ, ವಿಲಿಯಂ ಹಾರ್ವೆ, ಲೂಯಿಸ್ ಪಾಶ್ಚರ್ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ...
READ MORE