ಮನೆಯಂಗಳದಲ್ಲಿ ಔಷಧಿವನ ಎಂಬುದು ವಸುಂಧರಾ ಎಂ ಅವರ ಕೃತಿಯಾಗಿದೆ. ಮನೆಯ ಸುತ್ತ ಇದ್ದಷ್ಟು ಸ್ಥಳದಲ್ಲಿ ಹೊಂದಿಸಿಕೊಂಡು ಔಷಧಿ ಮತ್ತು ಸುಗಂಧ ಸಸ್ಯಗಳನ್ನು ಬೆಳೆಸಬೇಕೆನ್ನುವ ಸದಾಶಯದಿಂದ ರೂಪುಗೊಂಡ ಪುಸ್ತಕವಿದು. ಮುಖ್ಯವಾಗಿ ಮಲೆನಾಡು, ಉತ್ತರ ಕರ್ನಾಟಕ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಿಗೆ ಸೂಕ್ತವಾದ ಸಸ್ಯಗಳನ್ನು ಬೆಳೆಸುವ ಬಗ್ಗೆ ಇಲ್ಲಿ ನಿರೂಪಿಸಲಾಗಿದೆ. ಗಿಡಮೂಲಿಕೆಗಳ ಔಷಧೀಯ ಗುಣಗಳು, ಬಳಕೆಯ ವಿಧಾನ ಹಾಗೂ ಬೇರೆ ಬೇರೆ ಭಾಷೆಯಲ್ಲಿ ಮೂಲಿಕೆಗಳ ಹೆಸರುಗಳ ವಿವರಗಳನ್ನು ನೀಡಿದ್ದಾರೆ. ತುಂಬಾ ಸರಳ ವಿವರಣೆಗಳಿಂದ ಕೂಡಿರುವ ಈ ಪುಸ್ತಕವು ಸಾಮಾನ್ಯ ಓದುಗನಿಗೂ ಉಪಯುಕ್ತವಾಗಿದ್ದು, ಮನೆಯ ಸುತ್ತಮುತ್ತ ಇರುವ ಜಾಗಗಳನ್ನು ಸೂಕ್ತವಾಗಿ ಬಳಸಿ ಸಣ್ಣ ಮೂಲಿಕಾ ವನ ನಿರ್ಮಾಣಕ್ಕೆ ಪ್ರೇರಣೆ ನೀಡಬಲ್ಲುದು. ಪ್ರತಿ ಸಸ್ಯವನ್ನು ವಿವಿಧ ಭಾಷೆಯಲ್ಲಿ ಕರೆಯುವ ರೀತಿ, ಅವುಗಳು ದೊರೆಯುವ ಸ್ಥಳಗಳನ್ನೂ ಉಲ್ಲೇಖಿಸಿರುವುದು ಓದುಗರಿಗೆ ಹೆಚ್ಚಿನ ಅನುಕೂಲವಾಗಿದ್ದು, ಸಸ್ಯಲೋಕದ ಸಮಗ್ರ ಚಿತ್ರಣವನ್ನು ಮೂಡಿಸುತ್ತದೆ.
©2024 Book Brahma Private Limited.