‘ನಮ್ಮ ದನಿ’ ಅದರ ರೂಪ ಹಾಗೂ ಸ್ವಯಂ ಚಿಕಿತ್ಸೆ ಕೃತಿಯು ಡಾ.ಜಿ. ಪುರುಷೋತ್ತಮ ಅವರ ಆರೋಗ್ಯ ಸಂಬಂಧಿತ ಕೃತಿಯಾಗಿದೆ. ಕೃತಿಯ ಲೇಖಕ ಹೇಳುವಂತೆ; ದನಿ ಅಥವಾ ಧ್ವನಿಯು ಜೀವಿಗಳಲ್ಲೆಲ್ಲ ಇರುವುದಾದರೂ ಮನುಷ್ಯರಲ್ಲಿ ಅದು ಪರಿವರ್ತನೆಯಾಗಿ ಮಾತಿನ ತನಕ ಬಂದಿರುತ್ತದೆ. ನಮ್ಮ ಮೊದಲ ದನಿಯು ಅಳುವಿನ ಮೂಲಕ ವ್ಯಕ್ತವಾಗುವುದಲ್ಲವೇ? ಅಭಿಪ್ರಾಯ ವ್ಯಕ್ತಪಡಿಸಲು ದನಿ ಅತ್ಯವಶ್ಯ. ಇದರ ಬಗೆಗೆ ಕೆಲವು ಮಾಹಿತಿಗಳನ್ನು ನೀಡುತ್ತ, ಧ್ವನಿ ಪೆಟ್ಟಿಗೆ ಮತ್ತು ಮಾತು ಹೊರಡುವ ಬಗ್ಗೆ ವೈದ್ಯರಾಗಿರುವ ಲೇಖಕರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಧ್ವನಿ ಬದಲಾವಣೆಯ ತಂತ್ರವನ್ನು ಅಭ್ಯಾಸದ ಮೂಲಕ ಕರಗತ ಮಾಡಿಕೊಳ್ಳುವುದು ಹೇಗೆಂಬುದನ್ನು ವಿವರವಾಗಿ ತಿಳಿಸಿದ್ದಾರೆ. ಒಬ್ಬರ ಧ್ವನಿಯು ಇನ್ನೊಬ್ಬರದಂತಿರುವುದಿಲ್ಲ; ಆದರೆ ದನಿಯ ಅನುಕರಣೆ ಸಾಧ್ಯ ಹಾಗೂ ಹಿನ್ನೆಲೆ ಗಾಯಕರಿಗೆ ಇದು ಉಪಯೋಗಕ್ಕೆ ಬರುತ್ತದೆ. ಧ್ವನಿ ಚಿಕಿತ್ಸೆ ಬಗೆಗೆ ಇಲ್ಲಿ ಹಲವಾರು ಮಾಹಿತಿಗಳಿವೆ ಎನ್ನುತ್ತಾರೆ
ಮೂಲತಃ ಡಾ. ಜಿ.ಪುರುಷೋತ್ತಮರು ಕಿವಿ-ಮೂಗು-ಗಂಟಲು ತಜ್ಞರು. ಬೆಂಗಳೂರಿನಲ್ಲಿ ವಾಸ. ಮೈಸೂರು ವಿಶ್ವವಿದ್ಯಾಲಯದಿಂದ ಅವರು ಮಾತು ಹಾಗೂ ಶ್ರವಣ ದೋಷ ಕುರಿತ ಶಿಕ್ಷಣದಲ್ಲಿ ಬಿಎಸ್ ಸಿ ಪದವಿ (1974) ಹಾಗೂ ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ (1977) ಪಡೆದರು. ಕಿವುಡು ಮಗು ಮಾತಾಡಬಲ್ಲದು ಎಂಬ ಕೃತಿಗೆ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ‘ಕುವೆಂಪು ವೈದ್ಯಸಾಹಿತ್ಯ ಪ್ರಶಸ್ತಿ’ (2008) ಲಭಿಸಿದೆ. ...
READ MORE