ನಮ್ಮ ಶರೀರದ ಬಹು ಮುಖ್ಯ ಅಂಗ ಮಿದುಳು, ಅದರ ರಚನೆ, ವಿವಿಧ ಭಾಗಗಳು, ಅವು ಯಾವ ಯಾವ ಕಾರ್ಯವನ್ನು ನಿರ್ವಹಿಸುತ್ತವೆ. ಮಿದುಳಿನ ದೋಷಪೂರಿತ ಬೆಳವಣಿಗೆಯು ಬುದ್ದಿಮಾಂದ್ಯತೆಗೂ ಮಾನಸಿಕ ಕಾಯಿಲೆಗೂ ಹೇಗೆ ಕಾರಣ? ತಲೆನೋವು ಹೇಗೆ ಬರುತ್ತದೆ? ಇದರ ಅಡ್ಡ ಪರಿಣಾಮಗಳೇನು? ಇತ್ಯಾದಿ ಲೇಖಕರು ಸವಿಸ್ತಾರವಾಗಿ ವಿವರಿಸಿದ್ದಾರೆ. ಮಿದುಳಿಗೆ ಘಾಸಿಯಾದಾಗ, ಪೆಟ್ಟಾದಾಗ ಆಗುವ ಹಾನಿಯ ಕುರಿತು ಮಾಹಿತಿ ಇದೆ. ಈ ಕೃತಿ ಈವರೆಗೆ 6 ಮುದ್ರಣ ಕಂಡಿದೆ.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE