‘ವೈದ್ಯನ ಹತ್ತು ಮುಖಗಳು’ ಎಂಬುದು ಡಾ. ಬಿ.ಟಿ. ರುದ್ರೇಶ್ ಅವರ ಕೃತಿ. ವೃತ್ತಿಯಿಂದ ಹೋಮಿಯೋಪತಿ ವೈದ್ಯರಾದ ಲೇಖಕರು, ಹೋಮಿಯೋಪತಿ ವೈದ್ಯಚಿಕಿತ್ಸೆಯು ಉಳಿದೆಲ್ಲ ಚಿಕಿತ್ಸಾ ಪದ್ಧತಿಗಳಿಗಿಂತ ತುಂಬಾ ಪರಿಣಾಮಕಾರಿ ಎಂದು ಸಮರ್ಥಿಸಿಕೊಳ್ಳುವುದರ ಜೊತೆಗೆ ಜನರು ತಮ್ಮ ಆರೋಗ್ಯವನ್ನು ಹೇಗೆ ಕಾಯ್ದುಕೊಳ್ಳಬೇಕು ಎಂಬುದರ ಸೂಕ್ಷ್ಮ ಹಾಗೂ ಸೂಕ್ತ ಸಲಹೆಗಳು ಈ ಕೃತಿಯ ವೈಶಿಷ್ಟ್ಯ. ಎಲ್ಲ ಸಮಸ್ಯೆಗಳ ಮೂಲ ಮನಸ್ಸು ಎಂಬ ಸಂಗತಿಯನ್ನು ಉದಾಹರಣೆಗಳ ಸಹಿತ ವಿವರಿಸುತ್ತಾರೆ. ವೈದ್ಯರು ಕೇವಲ ಹಣಕ್ಕಾಗಿ ವೃತ್ತಿ ಮಾಡುತ್ತಾರೆ ಎಂಬುದು ಒಂದು ಅಂಶ. ಆದರೆ, ವೈದ್ಯವೃತ್ತಿಯು ಎಲ್ಲ ಮಾನವೀಯ ನೆಲೆಗಳ ಸಂಗಮವಾಗಿದೆ ಎಂದೂ ಅವರು ಓದುಗರ ಗಮನ ಸೆಳೆಯುತ್ತಾರೆ.
©2024 Book Brahma Private Limited.