ಕಣ್ಣು ಎನ್ನುವುದು ಬೆಲೆಕಟ್ಟಲಾಗದ ನಮ್ಮ ದೇಹದ ಭಾಗ. ಈ ಕಣ್ಣಿನ ಬಗ್ಗೆ ನಮಗಿರುವ ಅಂಧಕಾರವನ್ನು ತೊಲಗಿಸುವ ಕೆಲಸವನ್ನು ಈ ಪುಟ್ಟ ಕೃತಿ ಮಾಡುತ್ತದೆ. ಕಣ್ಣು ನಿರ್ವಹಿಸುವ ಕಾರ್ಯವೈಖರಿಯೇ ಒಂದು ಅಚ್ಚರಿ. ಇಂತಹ ಕಣ್ಣಿನ ಕುರಿತಂತೆ ನಾವು ವಹಿಸುವ ನಿರ್ಲಕ್ಷದ ಕಡೆಗೆ ಕೃತಿ ಗಮನ ಸೆಳೆಯುತ್ತದೆ. ಕಣ್ಣು ಕಳೆದುಕೊಂಡ ಬಳಿಕ ವೈದ್ಯರನ್ನು ಕಾಣುವ ಬದಲು, ಹೇಗೆ ಮುಂಜಾಗರೂಕತೆ ವಹಿಸುವ ಮೂಲಕ ನಮ್ಮ ಕಣ್ಣುಗಳನ್ನು ಗರಿಷ್ಠ ಮಟ್ಟದಲ್ಲಿ ಕಾಪಾಡಿಕೊಂಡು ಬರಬಹುದು ಎನ್ನುವುದನ್ನು ಲೇಖಕರು ತಿಳಿಸುತ್ತಾರೆ. ಈ ಪುಸ್ತಕದಲ್ಲಿ ಅವರು ಕಣ್ಣಿನ ವಿವಿಧ ಕಾಯಿಲೆಗಳು, ರೋಗಲಕ್ಷಣಗಳು ಮುಂದಾದ ವಿಚಾರಗಳ ಬಗ್ಗೆ ಪ್ರಸ್ತಾಪಿಸಿರುವುದೇ ಅಲ್ಲದೆ, ದೈನಂದಿನ ಜೀವನದಲ್ಲಿ ಜನಸಾಮಾನ್ಯರು ಕಣ್ಣಿನ ಬಗ್ಗೆ, ಹೊಂದಿರುವ ತಪ್ಪು ಕಲ್ಪನೆಗಳು, ಮೂಢನಂಬಿಕೆಗಳು ಇತ್ಯಾದಿಗಳ ಕುರಿತಂತೆ, ಕಣ್ಣಿನ ಶಸ್ತ್ರಕ್ರಿಯೆಯ ಇತಿಹಾಸ, ಆಧುನಿಕ ಚಿಕಿತ್ಸಾ ವಿಧಾನಗಳು ಮುಂತಾದ ಉಪಯುಕ್ತ ವಿಷಯಗಳ ಬಗ್ಗೆ ವಿವರವಾದ ಮಾಹಿತಿಗಳು ಈ ಕೃತಿಯಲ್ಲಿದೆ.
ಡಾ.ಎಚ್.ಎಸ್.ಮೋಹನ್ ಅವರು ’ಇರುವುದಿಲ್” ಎಂಬ ವಿಚಿತ್ರ ಕಾವ್ಯನಾಮದಲ್ಲಿ ಆರೋಗ್ಯದ ಕುರಿತಾದ ಕೃತಿ, ಲೇಖನಗಳನ್ನು ಬರೆದವರು. ಹುಟ್ಟಿದ್ದು 31-08-1955ರಂದು ಶಿವಮೊಗ್ಗ ಜಿಲ್ಲೆಯ ಹೊಸಬಾಳೆ ಎಂಬಲ್ಲಿ. ಎಂ.ಬಿ.ಬಿಎಸ್, ಎಂ.ಎಸ್ (ಆಫ್ರೋ), ಡಿ.ಜೆ.ಎಂ.ಎಸ್ ಪೂರ್ಣಗೊಳಿಸಿರುವ ಮೋಹನ್ ವೃತ್ತಿಯಲ್ಲಿ ಕಣ್ಣಿನ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯದ ಕುರಿತಾದ ಕೃತಿಗಳನ್ನು ಬರೆಯುವ ಮೋಹನ್ ಅವರ ಪ್ರಕಟಿತ ಕೃತಿಗಳು- ಪಂಚೇಂದ್ರಿಯಗಳ ಆರೋಗ್ಯ ರಕ್ಷಣೆ, ಏಡ್ಸ್-50 ಪ್ರಶ್ನೆಗಳು ಮತ್ತು ಪ್ರಚಲಿತ ಸಮಸ್ಯೆಗಳು. ...
READ MORE