ಮನೆಮದ್ದು ಜನರ ಅನುಭವ ಮತ್ತು ನಿರಂತರ ಪ್ರಯೋಗದಿಂದ ರಚನೆಯಾಗಿದ್ದು. ಭಾರತೀಯ ಸಂಸ್ಕ್ರತಿಯಲ್ಲಿ ಮಹತ್ತರ ಸ್ಥಾನವನ್ನು ಪಡೆದಿದೆ. ತಮ್ಮ ಅಡುಗೆ ಮನೆಯಲ್ಲೇ ಇರುವ ಔಷಧಿಗಳ ಕಣಜವನ್ನು ಯಾವ ಕಾಯಿಲೆಗೆ ಹೇಗೆ, ಎಷ್ಟು ಪ್ರಮಾಣದಲ್ಲಿ ಬಳಸಿಕೊಳ್ಳಬೇಕೆಂದು ಎಂಬೂದರ ಬಗ್ಗೆ ಅರಿವಿರದ ಸಾಮಾನ್ಯ ಜನರು, ಸಣ್ಣಪುಟ್ಟ ಸಮಸ್ಯೆಗಳಿಗೂ ದುಬಾರಿ ವೈದ್ಯಕೀಯ ಚಿಕಿತ್ಸೆ ಅಥವಾ ರಾಸಾಯನಿಕ ಔಷಧಿಗಳ ಮೊರೆ ಹೋಗುತ್ತಾರೆ. ಮನೆಮದ್ದುಗಳ ಪ್ರಾಥಮಿಕ ಜ್ಞಾನ, ಅದರ ಉಪಯೋಗ, ಅವುಗಳ ಬಗ್ಗೆ ಅಧ್ಯಯನ ಮಾಡಿ ಅವುಗಳನ್ನು ಸಂಪಾದಿಸಿಕೊಂಡು ಡಾ. ವಸುಂಧರಾ ಭೂಪತಿ’ ಈ ಕೃತಿಯಲ್ಲಿ ಕೊಟ್ಟಿದ್ದಾರೆ. ಸಾಮಾನ್ಯ ಕಾಯಿಲೆಗಳು ಬಂದಾಗ ಧೃತಿಗೆಡದೆ ಮನೆಮದ್ದು ಮಾಡಿಕೊಂಡಲ್ಲಿ ತಕ್ಷಣ ಉಪಶಮನ ಪಡೆಯಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ಈ ಕೃತಿಯಲ್ಲಿ ನೀಡಿದ್ದಾರೆ.
©2024 Book Brahma Private Limited.