ವೈದ್ಯ ವಿಜ್ಞಾನ ಲೇಖಕಿ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರ ಕೃತಿ-ಜೀವನ ಸುಜ್ಞಾನ. ದೇಹದ ಆರೋಗ್ಯವನ್ನು ಹೇಗೆ ಜತನವಾಗಿ ಕಾಪಾಡಿಕೊಳ್ಳಬೇಕು. ವಿಶೇಷವಾಗಿ ಹೃದಯ ಸಂಬಂಧಿ ಚಟುವಟಿಕೆಗಳು, ಕಾಯಿಲೆಗಳು, ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳು ಸೇರಿದಂತೆ ಸುಜ್ಞಾನದೊಂದಿಗೆ ಈ ಜೀವನವನ್ನು ಸಾಗಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂಬ ಅಂಶಗಳ ವಿಷಯಗಳನ್ನು ಈ ಕೃತಿ ಒಳಗೊಂಡಿದೆ.
ವೃತ್ತಿಯಲ್ಲಿ ವೈದ್ಯೆಯಾಗಿ, ವಿಶೇಷವಾಗಿ ಮಕ್ಕಳ ಹೃದಯತಜ್ಞೆಯಾಗಿ, ಬಡವರ ಬಗ್ಗೆ ಮಾನವೀಯತೆ, ಅನುಕಂಪದ ಗುಣಗಳನ್ನು ಹೊಂದಿರುವ, ಮನದಾಳದಲ್ಲಿ ಮೂಡುವ ಆರ್ದ್ರ ಭಾವಗಳಿಗೆ ಅಕ್ಷರ ರೂಪ ನೀಡುವ ಸಾಹಿತಿಯಾಗಿ ಓದುಗರ ಮನಸ್ಸನ್ನು ಸೆಳೆದಿರುವ ವಿಜಯಲಕ್ಷ್ಮಿ ಬಾಳೇಕುಂದ್ರಿಯವರು ಹುಟ್ಟಿದ್ದು 1950 ರ ಆಗಸ್ಟ್ 6ರಂದು ಬೆಳಗಾವಿಯಲ್ಲಿ. ತಂದೆ ಈಶ್ವರಪ್ಪ ಗುರುಸಿದ್ಧಪ್ಪ ಬಾಳೇಕುಂದ್ರಿ, ತಾಯಿ ಸಿದ್ದವ್ವ. ತಂದೆ ಮುಂಬಯಿ ವಿಶ್ವವಿದ್ಯಾಲಯದಿಂದ ಪಶುವೈದ್ಯಕೀಯದಲ್ಲಿ ಚಿನ್ನದ ಪದಕದೊಡನೆ ಪದವಿ ಪಡೆದಿದ್ದಲ್ಲದೆ ವೈಸ್‌ರಾಯ್‌ರವರಿಂದ ಪ್ರಶಸ್ತಿ ಪಡೆದ ಪ್ರತಿಭಾನ್ವಿತರು. ತಾಯಿಯ ತಂದೆ ರಾವಬಹದ್ದೂರ್ ವೈಜನಾಥ ಅನಗೋಳ್‌ರವರು ಬೆಳಗಾವಿಯ ಕೆ.ಎಲ್.ಇ. ಸೊಸೈಟಿಯ ಸಂಸ್ಥಾಪಕರಲ್ಲೊಬ್ಬರು, ಸುಶಿಕ್ಷಿತ, ಸುಸಂಸ್ಕೃತ ಮನೆತನ. ಪ್ರಾರಂಭಿಕ ಶಿಕ್ಷಣ ...
READ MORE