ದಂತಾರೋಗ್ಯದ ಕುರಿತು ಇತ್ತೀಚೆಗೆ ಜನರಲ್ಲಿ ಅರಿವು ಮೂಡುತ್ತಿದೆ. ಅದಕ್ಕೆ ಮಾಧ್ಯಮ, ಹೆಚ್ಚಿದ ಶಿಕ್ಷಣ-ಆರ್ಥಿಕಮಟ್ಟ ಮುಖ್ಯ ಕಾರಣಗಳು. ಮಕ್ಕಳ ದಂತಾರೋಗ್ಯದ ವಿಷಯಕ್ಕೆ ಬಂದಾಗ ಪೋಷಕರ ನಿರ್ಲಕ್ಷ್ಯ ಕಾಣುತ್ತಿದೆ.
ನಿಯಮಿತವಾಗಿ ಮಕ್ಕಳ ಬಗ್ಗೆ ಗಮನವಿಟ್ಟು ಸೂಕ್ಷ್ಮವಾಗಿ ಪರಿಶೀಲಿಸದ ಹೊರತು ಆರಂಭಿಕ ಹಂತದಲ್ಲಿ ತೊಂದರೆಗಳು ಪತ್ತೆಯಾಗುವುದಿಲ್ಲ. ಪೋಷಕರ ವರ್ತನೆಯೂ ಅನುಕರಣಾಶೀಲ ಮಕ್ಕಳ ಮೇಲೆ ಬೀರುವ ಪ್ರಭಾವ ಅಪಾರ. ಮಕ್ಕಳ ದಂತರೋಗ್ಯದಲ್ಲಿ ಅತೀ ಹೆಚ್ಚಿನ ಮಹತ್ವ ಪೋಷಕರಿಗೆ! ಇದನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಹಲ್ಲುಗಳ ಮಹತ್ವ, ರಕ್ಷಣೆ, ಆಹಾರ, ಹುಳುಕು ಹಲ್ಲುಗಳು ಹೀಗೆ ಜನ ಸಾಮಾನ್ಯರಿಗೆ ಇರುವ ಅನೇಕ ಸಂಶಯಗಳನ್ನು ಪರಿಹರಿಸುವ ದೃಷ್ಟಿಯಿಂದ ಡಾ. ಕೆ.ಎ. ಚೈತ್ರಾ ಬರೆದ ಲೇಖನಗಳನ್ನು ಡಾ. ವಸುಂಧರಾ ಭೂಪತಿ ಸಂಗ್ರಹಿಸಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಈ ಲೇಖನಗಳು ಪ್ರಕಟವಾಗಿವೆ.
©2024 Book Brahma Private Limited.