ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ರೋಗಿಗಳ, ಓದುಗರ ಮನದಲ್ಲಿ ಉದ್ಭವಿಸುವ 80 ಪ್ರಶ್ನೆಗಳಿಗೆ ಉತ್ತರ, ಸಮಾಧಾನ ನೀಡುವ ಪ್ರಯತ್ನವನ್ನು ಈ ಕೃತಿ ಮಾಡುತ್ತದೆ. ಲೇಖಕರಾದ ಸಿ.ಜಿ.ಕೇಶವಮೂರ್ತಿಯವರು ತಮ್ಮ ತಿಳುವಳಿಕೆಯನ್ನು ನಿರಂತರವಾಗಿ ಓದುಗನ ಮೇಲೆ ಪ್ರಯೋಗಮಾಡದೆ , ಓದುಗನನ್ನೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದರ ಜೊತೆಗೆ ಪ್ರಶ್ನೋತ್ತರಗಳ ರೂಪದಲ್ಲಿ ಹೃದಯದ ಪರಿಕಲ್ಪನೆಯನ್ನು ಈ ಕೃತಿಯು ತೆರೆದಿಡುತ್ತಾ ಮುಂದೆ ಸಾಗುತ್ತದೆ. ಹೃದ್ರೋಗದ ಬಗ್ಗೆ ಇರುವ ಹಲವು ತಪ್ಪು ಕಲ್ಪನೆಗಳು ಮತ್ತು ಆತಂಕಗಳು,ಪೂರ್ವಭಾವಿ ಯೋಚನೆಗಳನ್ನು ಹೊಡೆದು ಹಾಕಿ ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ರಚನೆಯಾದ ಈ ಕೃತಿಯು ಹಲವು ಗೊಂದಲಗಳನ್ನು , ಭಯವನ್ನು ನಿವಾರಣೆ ಮಾಡುತ್ತದೆ.
ಮೂಲತಃ ಶಿವಮೊಗ್ಗದವರಾದ ಡಾ. ಸಿ.ಜಿ. ಕೇಶವಮೂರ್ತಿ ಅವರು ವೃತ್ತಿಯಿಂದ ವೈದ್ಯರು. ವೈದ್ಯಸಾಹಿತಿಯೂ ಹೌದು.ಮಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ನಡೆಸಿದ ಅವರು ಮೈಸೂರು ಮೆಡಿಕಲ್ ಕಾಲೇಜಿನಿಂದ (1974) ಎಂಬಿಬಿಎಸ್ ಪದವಿ ಪಡೆದರು. ಸದ್ಯ ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ. ಕೃತಿಗಳು: ಭೂಮಪಾನ ಬಿಡಿ, ಇಳಿ ವಯಸ್ಸಿನವರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ, ಹೃದ್ರೋಗ ಸಮಸ್ಯೆಗಳು-80 ಪ್ರಶ್ನೆಗಳು. . ...
READ MORE