ವಿಭಕ್ತ ಕುಟುಂಬಗಳು ಹೆಚ್ಚುತ್ತಿವೆ. ಅಪ್ಪ ಅಮ್ಮಂದಿರು ಉದ್ಯೋಗಸ್ಥರಾಗುತ್ತಿದ್ದಾರೆ. ಮಕ್ಕಳ ಕಾಳಜಿ ಮಾಡಲು ಮನೆಯಲ್ಲಿ ಹಿರಿಯರಿಲ್ಲದೆ ಪಾಲಕರಿಗೆ ತೊಂದರೆ ಆಗುತ್ತಿದೆ. ಪಾಲಕರು ಮಗುವಿನ ಪಾಲನೆ, ಪೋಷಣೆ ಬಗ್ಗೆ ತಿಳಿದುಕೊಳ್ಳಲು ಸಮಯವಿಲ್ಲ. ಇಂತಹ ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ 'ಕಂದನ ಆರೋಗ್ಯ, ಮನಸ್ಸು ಹೊಸದೇನಿದೆ?' ಕೃತಿಯಲ್ಲಿ ಮಾಡಲಾಗಿದೆ.
ಎದೆ ಹಾಲು ಉಣಿಸುವಾಗ, ಊಟ, ತಿಂಡಿ ನೀಡುವಾಗ ಎದುರಾಗುವ ಸಮಸ್ಯೆ, ಹೆತ್ತವರ ಅನುಪಸ್ಥಿತಿಯಲ್ಲಿ ಮಕ್ಕಳ ಕಾಳಜಿ, ನಿದ್ರೆ, ಸುರಕ್ಷತೆ, ಪಂಚೇಂದ್ರಿಯಗಳ ಪ್ರಚೋದನೆ, ಸೋಂಕು ಕಾಯಿಲೆಗಳು ಮುಂತಾದ ವಿಷಯಗಳ ಕುರಿತ ಸಮಗ್ರ ಮಾಹಿತಿ ಈ ಪುಸ್ತಕದಲ್ಲಿದೆ.
ಗೋವಾ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಎಂ. ಡಿ. ಸೂರ್ಯಕಾಂತ ಅವರು ಹವ್ಯಾಸಿ ಬರಹಗಾರರು. ಸಾಹಿತ್ಯದೆಡೆಗಿನ ಒಲವು ಮಕ್ಕಳ ಆರೋಗ್ಯ ಪಾಲನೆ ಕೃತಿ ರಚಿಸಲು ಸಹಕಾರಿಯಾಯಿತು. ಇವರು ಬಳ್ಳಾರಿಯ ಮೆಡಿಕಲ್ ಕಾಲೇಜಿನಿಂದ ಎಂ.ಬಿ.ಬಿಎಸ್, ಕಲಬುರ್ಗಿಯ ಎಂ. ಆರ್. ವೈದ್ಯಕೀಯ ಮಹಾವಿದ್ಯಾಲಯದಿಂದ ಮಕ್ಕಳ ಆರೋಗ್ಯದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಪಡೆದಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಮಕ್ಕಳ ತಜ್ಞರಾಗಿ ಸೇವೆ ನಂತರ, ಆರೋಗ್ಯ ಇಲಾಖೆಯ ಅಪರ ನಿದೇಶಕರಾಗಿ ನಿವೃತ್ತಿ ಹೊಂದಿದ್ದಾರೆ. ಇವರು ಬರೆದ ಹಲವಾರು ಲೇಖನಗಳು ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ...
READ MORE