ಮಗುವಿನ ಹುಟ್ಟಿನಿಂದ ಹಿಡಿದು ನಂತರ ಅದು ಆರಂಭದ ಬೆಳವಣಿಗೆವರೆಗೂ ಮಗು ಬೆಳವಣಿಗೆಯಾಗುವ ಪ್ರತಿಯೊಂದು ಹಂತವನ್ನು ಈ ಕೃತಿಯಲ್ಲಿ ’ಡಾ.ಕರವೀರ ಪ್ರಭು ಕ್ಯಾಲಕೊಂಡ’ ವಿವರಿಸಿದ್ದಾರೆ. ಮಗುವಿಗೆ ಆರಂಭದಲ್ಲೇ ಎದುರಾಗುವ ಕಷ್ಟ ಕಾರ್ಪನ್ಯಗಳು, ಆಪತ್ತುಗಳು, ಅವುಗಳನ್ನು ಆರಂಭಿಕ ಹಂತದಲ್ಲೆ ಬರದಂತೆ ಹೇಗೆ ತಡೆಯಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ಈ ಕೃತಿಯೂ ಒದಗಿಸುತ್ತದೆ. ಇದೊಂದು ವೈಜ್ಞಾನಿಕವಾಗಿ ರಚನೆಯಾದ ಕೃತಿಯಾಗಿದ್ದು ,ಮಗುವಿನ-ಜನನ ಪೂರ್ವದ ಮಾಹಿತಿಯನ್ನು ಕೂಡ ಈ ವಿವರಿಸುತ್ತದೆ.
ಲೇಖಕ, ಕವಿ ಹಾಗೂ ವೈದ್ಯರಾದ ಡಾ. ಕರವೀರಪ್ರಭು ಕ್ಯಾಲಕೊಂಡ ಅವರು (ಶಸ್ತ್ರಚಿಕಿತ್ಸರು ಹಾಗೂ ಮಕ್ಕಳ ತಜ್ಞರು) ಬಾಗಲಕೋಟೆ ಜಿಲ್ಲೆಯ ಬಾದಾಮಿಯವರು. ‘ನಲವತ್ತರ ಅಂಚಿನಲ್ಲಿ’, ದೃಢ ಸಂಕಲ್ಪ, ಆರೋಗ್ಯಕ್ಕೆ ಕಾಯಕಲ್ಪ, ಹಾಡು ಹೇಳುವೆ ಕೇಳೆ ಗುಬ್ಬಚ್ಚಿ- ಹೀಗೆ 40 ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. 2016ರಲ್ಲಿ ಸರಕಾರಿ ವೃತ್ತಿಯಿಂದ ನಿವೃತ್ತಿ ಪಡೆದಿದ್ದಾರೆ. ಪ್ರಶಸ್ತಿ-ಗೌರವಗಳು: ಗ್ರಾಮೀಣ ಸೇವೆಗಾಗಿ ಡಾ.ಬಿ.ಸಿ.ರಾಯ್ ಪ್ರತಿಷ್ಠಿತ ಪ್ರಶಸ್ತಿ, ಕರ್ನಾಟಕ ರಾಜ್ಯ ವೈದ್ಯ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಕಾವ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಸಮಗ್ರ ಸಾಹಿತ್ಯ ಕ್ಕಾಗಿ ಅಗ್ನಿವೇಷ ಸಾಹಿತ್ಯ ಪ್ರಶಸ್ತಿ,, ಬೆಸ್ಟ್ ಐ ಸಿ ಡಿ ಎಸ್ ಮೆಡಿಕಲ್ ಆಫಿಸರ್ ಆಫ್ ...
READ MORE