ಸ್ವಾಸ್ಥ್ಯ ಸಂಗಾತಿ-ಡಾ. ಸ.ಜ. ನಾಗಲೋಟಿಮಠ ಅವರು ಕೃತಿ. ತಮ್ಮ ವೃತ್ತಿಯಲ್ಲಿಯ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ. ರೋಗದ ಬಗ್ಗೆ ರೋಗಿಗಳನ್ನು ಹಾಗೂ ಅವರ ಸಂಬಂಧಿಕರಿಗೆ ಮಾಹಿತಿ ನೀಡುವಾಗ ಅನುಭವಿಸಿದ ಕಷ್ಟಗಳನ್ನು, ಕೆಲ ಸ್ವಾರಸ್ಯಕರ ಪ್ರಸಂಗಗಳನ್ನು ಹೇಳುವ ಮೂಲಕ ವೈದ್ಯವೃತ್ತಿ ಎಷ್ಟೊಂದು ಜವಾಬ್ದಾರಿಯುತ ಹಾಗೂ ಎಷ್ಟೊಂದು ಕಷ್ಟದಾಯಕ ಎಂಬುದು ಅರಿವಿಗೆ ಬರುತ್ತದೆ. ರೋಗಿಗೆ ತನ್ನ ರೋಗದ ಬಗ್ಗೆ ತಿಳಿಯಲು ಆತುರ ಇರುತ್ತದೆ. ಆದರೆ, ಒಂದು ಪರೀಕ್ಷೆಗೆ ಕಾಲಾವಕಾಶ ಬೇಕು ಎಂಬುದನ್ನೂ ಅವರು ಸಹಿಸರು. ಆಗ ಅವರ ಚಡಪಡಿಕೆಗಳ ವಿವರಣೆ ಸ್ವಾರಸ್ಯಕರವಾಗಿ ವಿವರಿಸಲಾಗಿದೆ. ಇದೇ ರೀತಿ, ವಿವಿಧ ಸಂದರ್ಭದಲ್ಲಿ ಆದ ಅನುಭವಗಳನ್ನು ವೈಜ್ಞಾನಿಕ ಕಾರಣ ಸಹಿತ ಅತ್ಯಂತ ಸಂಯಮದಿಂದ ವಿವರಿಸಿದ್ದು, ರೋಗ, ಅದರ ಅರಿವು, ರೋಗದ ಮೂಲೋತ್ಪಾಟನೆ, ವೈದ್ಯರೊಂದಿಗೆ ರೋಗಿಯೂ ಹೇಗೆ ಸಹಕರಿಸಬೇಕು ಇತ್ಯಾದಿ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೃತಿ ಇದು. ಭಾಷೆಯು ತುಂಬಾ ಆತ್ಮೀಯವಾಗಿದೆ. ಸರಳವಾಗಿದೆ.
ವೈದ್ಯಕೀಯ ಹಾಗೂ ವೈಜ್ಞಾನಿಕ ಬರೆಹಗಳಲ್ಲಿ ಡಾ. ಎಸ್.ಜಿ. ನಾಗಲೋಟಿಮಠ ಹೆಸರು ಚಿರಪರಿಚಿತ. ಮೂಲತಃ ಬಾಗಲಕೋಟೆ ಜಿಲ್ಲೆಯವರು. ಇವರು ಜನಿಸಿದ್ದು 1940 ಜುಲೈ 20ರಂದು. ತಂದೆ ಜಂಬಯ್ಯ. ತಾಯಿ ಹಂಪವ್ವ್. ಹುಬ್ಬಳ್ಳಿಯ ಕರ್ನಾಟಕ ವ್ಯದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯ ಪದವೀಧರರು. ಹುಬ್ಬಳ್ಳಿಯ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ನಂತರ ಕಿಮ್ಸ್ ನಿರ್ದೇಶಕರೂ ಹಾಗೂ ಕರ್ನಾಟಕ ವಿಜ್ಞಾನ ಪರಿಷತ್ತು ಮಾಜಿ ಅಧ್ಯಕ್ಷರೂ ಆಗಿದ್ದರು. ಕೃತಿಗಳು: ಮಾನವ ದೇಹದ ಮಿಲಿಟರಿ ಪಡೆ, ವೈದ್ಯಕೀಯ ಪ್ರಯೋಗಾಲಯ, ಸರ್ವಜ್ಞ ವಚನಗಳಲ್ಲಿ ಆರೋಗ್ಯ, ಪ್ಲಾಸ್ಟಿಕ್ ಸರ್ಜರಿ, ಪರಿಸರ ಮಾಲಿನ್ಯ, ವೈದ್ಯಕೀಯ ವಿಶ್ವಕೋಶ. ಪ್ರಶಸ್ತಿ- ಪುರಸ್ಕಾರಗಳು: ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ...
READ MORE