ಲೇಖಕ ಎಂ.ಎಲ್. ರಾಘವೇಂದ್ರ ರಾವ್ ಹಾಗೂ ಎಂ.ವಿ.ಆರ್ ಅವರು ಜಂಟಿಯಾಗಿ ರಚಿಸಿರುವ ಕೃತಿ-ನಡಿಗೆ. ಎಲ್ಲ ಕಸರತ್ತುಗಳ ಪೈಕಿ ನಡಿಗೆಯು ಎಷ್ಟೊಂದು ಪರಿಣಾಮಕಾರಿಯಾದದ್ದು ಎಂಬುದರ ಅರಿವು ಮೂಡಿಸುವ ಕೃತಿ. ನಡಿಗೆಯು ಕೇವಲ ದೇಹಕ್ಕೆ ಕಸರತ್ತು ಮಾತ್ರವಲ್ಲ; ಮನಸ್ಸಿನ ಆರೋಗ್ಯಕ್ಕೆ ಹೇಗೆ ಸಹಕಾರಿ ಎಂಬುದರ ಮಾಹಿತಿಯೂ ಒಳಗೊಂಡಿದೆ. ನಡೆದಷ್ಟು ಆರೋಗ್ಯಕ್ಕೆ ಉತ್ತಮ. ಶಾರೀರಕ ಆಕಾರವನ್ನು ಆಕರ್ಷಣೀಯವಾಗಿರಿಸಿಕೊಳ್ಳಲೂ ನಡಿಗೆ ಸಹಕಾರಿ. ಬೇರೆ ಬೇರೆ ಕಸರತ್ತು ಮಾಡುವುದಕ್ಕಿಂತ ಮೊದಲು ನಡಿಗೆಯನ್ನು ರೂಢಿಸಿಕೊಳ್ಳಬೇಕು ಎಂಬುದರ ಪ್ರಾಥಮಿಕ ಅರಿವನ್ನೂ ಈ ಕೃತಿ ನೀಡುತ್ತದೆ.
ಹಿರಿಯ ಸಾಹಿತಿ, ಪ್ರಕಾಶಕರಾಗಿಯೂ ಪರಿಚಿತರಾಗಿದ್ದ ರಾಘವೇಂದ್ರರಾವ್ ಅವರು 1942 ಡಿಸೆಂಬರ್ 20ರಂದು ಮೈಸೂರಿನಲ್ಲಿ ಜನಿಸಿದರು. ತಾಯಿ ಅನಸೂಯಾಬಾಯಿ. ತಂದೆ ಲಕ್ಷ್ಮಣರಾವ್. ಇವರು ರಚಿಸಿದ ಕತೆಗಳು ಮೊದಲು ಪ್ರಕಟವಾಗಿದ್ದ ಜನಪ್ರಗತಿ ಹಾಗೂ ಮಲ್ಲಿಗೆ ಪತ್ರಿಕೆಗಳಲ್ಲಿ. ಮುರಳಿ ಎಂಬ ಮಾಸ ಪತ್ರಿಕೆಯಲ್ಲಿ ಸಹಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಇವರು ಧೃವ ಪತ್ರಿಕೆಯ ಸಹಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಮಧುರ ಎಂಬ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿದ ಇವರು ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ತೆಲುಗಿನ ಯಂಡಮೂರಿ ವೀರೇಂದ್ರನಾಥ್, ಕಳಾಪೂರ್ಣ ಲತಾ, ಮಧುರಾಂತಕಂ ರಾಜೇಶ್ವರರಾವ್, ಸೂರ್ಯದೇವರ ರಾಮಮೋಹನ ರಾವ್, ಮಾಲತಿ ಚೆಂಡೂರ್ ಸೇರಿದಂತೆ ಹಲವಾರು ಲೇಖಕರ ಅಂತರ್ಮುಖ, ತುಳಸೀವನ, ರಾಗ ತರಂಗಿಣಿ, ...
READ MORE