ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿವನ ವ್ಯಾಪಕ ಬದಲಾವಣೆಯು ಆರೋಗ್ಯ ಕ್ಷೇತ್ರವನ್ನು ರೋಗಗ್ರಸ್ಥವಾಗಿಸಿದೆ ಎಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯರವರ ಅಭಿಪ್ರಾಯ.ಆರೋಗ್ಯ ಕ್ಷೇತ್ರವನ್ನು ಕನ್ನಡದಲ್ಲಿ ಭಿನ್ನವಾಗಿ ನೋಡಿದವರಲ್ಲಿ ಮೊದಲಿಗರು ಡಾ. ಬಿ. ಎಂ. ಹೆಗ್ಡೆ. ಇದಾದ ಬಳಿಕ ಈ ವಲಯವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟವರು ವೃತ್ತಿಯಲ್ಲಿ ವೈದ್ಯರೂ, ಪ್ರವೃತ್ತಿಯಲ್ಲಿ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಕಕ್ಕಿಲ್ಲಾಯರಿಗೆ ಸಲ್ಲುತ್ತದೆ.ಇಲ್ಲಿಯ ಲೇಖನಗಳು ಕೇವಲ ಮನುಷ್ಯರ ರೋಗ ಮತ್ತು ಚಿಕಿತ್ಸೆಯ ಕುರಿತು ಮಾತ್ರ ಮಾತನಾಡುವುದಿಲ್ಲ. ಇಲ್ಲಿ ರೋಗದ ಕೇಂದ್ರ ದೇಹ ಮಾತ್ರವಲ್ಲ. ಒಂದು ವ್ಯವಸ್ಥೆಯೇ ಹೇಗೆ ವಿವಿಧ ರೋಗಗಳ ಜೊತೆಗೆ ಶಾಮೀಲಾಗಿ ಬಡ ರೋಗಿಗಳನ್ನು ಶೋಷಣೆಗೀಡು ಮಾಡಿವೆ ಎನ್ನುವುದನ್ನು ವಿವರಿಸಲಾಗಿದೆ.ಈ ಕೃತಿಯ ಮೂಲ ಉದ್ದೇಶ ನಮ್ಮ ಪರಿಸರ ಮತ್ತು ಮನೆ ಬಗ್ಗೆ ಜಾಗೃತಿಯನ್ನು ಮೂಡಿಸುವುದು.ಆರೋಗ್ಯದ ಕುರಿತಂತೆ ಮಾತನಾಡುವಾಗ ಅದು ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ಎಂದೇ ನಾವು ಭಾವಿಸುತ್ತೇವೆ. ಆದರೆ ಸದ್ಯದ ದಿನಗಳಲ್ಲಿ ಸಮಾಜ, ಸಮಾಜದ ನಂಬಿಕೆಗಳು, ರಾಜಕೀಯ, ಆರ್ಥಿಕ, ಶೈಕ್ಷಣಿಕ ವ್ಯವಸ್ಥೆ ಒಂದು ದೇಶದ, ಸಮಾಜದ ಆರೋಗ್ಯ ವ್ಯವಸ್ಥೆಯನ್ನು ಹೇಗೆ ನಿರ್ಮಿಸುತ್ತವೆ, ನಿಯಂತ್ರಿಸುತ್ತವೆ ಎನ್ನುವುದನ್ನು ಈ ಕೃತಿಯು ಮನಮುಟ್ಟುವ ಶೈಲಿಯಲ್ಲಿ ವಿವರಿಸಿದೆ.
©2024 Book Brahma Private Limited.