ಪ್ರತಿ ವರ್ಷ ಕ್ಯಾನ್ಸರ್ ಎಂಬ ಮಾಹಾಮಾರಿಯಿಂದ ಜನರು ಮೃತ ಪಡುತ್ತಿದ್ದಾರೆ. ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳು ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇದರ ಸಾಲಿಗೆ ಕ್ಯಾನ್ಸರ್ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ಜೀವಕಂಟಕ ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಹಾಗೂ ಜಾಗೃತಿ ಮೂಡಿಸುವ ಕೃತಿ ಇದಾಗಿದೆ. ಕ್ಯಾನ್ಸರ್ ತಗುಲುವ ಕಾರಣಗಳಿಂದ ಹಿಡಿದು ಮುನ್ನೆಚ್ಚರಿಕೆಯಾಗಿ ನಮ್ಮ ಆಹಾರ ಪದ್ಧತಿ, ಜೀವನ ಶೈಲಿಯ ಮೂಲಕ ತಡೆಗಟ್ಟಬಹುದಾದ ಕ್ರಮಗಳನ್ನು ಲೇಖಕಿ ಡಾ. ಬಿ.ಎನ್. ಪ್ರೇಮಾದೇವಿ ತಿಳಿಸಿದ್ದಾರೆ. ಈ ಕೃತಿಯನ್ನು ಲೇಖಕಿ ವಸುಂಧರಾ ಭೂಪತಿ ಸಂಪಾದಿಸಿದ್ದಾರೆ.
ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ. ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...
READ MORE