ಲೇಖಕ ಆಸೂರಿ. ಕೆ. ರಂಗರಾಜ ಅಯ್ಯಂಗಾರ್ ಅವರ ಕೃತಿ ʻಅಪಾನ ವಾಯುಮುದ್ರಾʼ. ಪುಸ್ತಕವು ಅಪಾನ ವಾಯುಮುದ್ರ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಆಗುವ ಪರಿಣಾಮವನ್ನು ಹಾಗೂ ಅದರ ವೈಜ್ಞಾನಿಕ ಕಾರಣಗಳನ್ನು ಹೇಳುತ್ತದೆ. ಈ ಮುದ್ರೆಯನ್ನು ಪ್ರತಿದಿನ ಮಾಡುವುದರಿಂದ ಗ್ಯಾಸ್ಟ್ರಿಕ್, ರಕ್ತದೊತ್ತಡ, ರಕ್ತಣಾಳಗಳಲ್ಲಿ ತಡೆ, ಮಲಬದ್ದತೆ, ಕೀಲು ನೋವು, ಹೃದಯಾಘಾತ ಸೇರಿದಂತೆ ಹಲವಾರು ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ. ಇದು ದೇಹದಲ್ಲಿ ಸಂಗ್ರಹವಾದ ಕಲ್ಮಶಗಳು ಮತ್ತು ಹಾನಿಕಾರಕಗಳನ್ನು ಹೊರಹಾಕಲು ಸಹಾಯಕವಾಗುತ್ತದೆ. ವ್ಯಾಯಾಮ, ಆಸನಗಳಂತೆ ವೈಜ್ಞಾನಿಕವಾಗಿ ಮುದ್ರೆಗಳ ಮೂಲಕವೂ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೀಗೆ ಮುದ್ರೆ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಈ ಪುಸ್ತಕವು ಹೇಳುತ್ತದೆ.
ಕೆ. ರಂಗರಾಜ ಅಯ್ಯಂಗಾರ್ ಅವರು ಬೆಂಗಳೂರಿನವರು. ಯೋಗ ಮುದ್ರಾ ಪ್ರಪಂಚ, ಮುದ್ರಾ ಪ್ರವೇಶ, ಮುದ್ರಾ ಯೋಗ ಸೇರಿದಂತೆ ಇತರೆ ಮಹತ್ವದ ಗ್ರಂಥಗಳನ್ನು ರಚಿಸಿದ್ದಾರೆ. ...
READ MORE