ಡಾ. ಪ್ರಕಾಶ್ ಸಿ. ರಾವ್ ಅವರು ರಚಿಸಿದ ಕೃತಿ-ಹತೋಟಿಯಲ್ಲಿಡಬಹುದಾದ ಕಾಯಿಲೆ-ಆಸ್ತಮಾ. ಆಸ್ತಮಾ ತುಂಬಾ ಪ್ರಾಚೀನ ಕಾಯಿಲೆ. ಅದಕ್ಕೆಂದೇ ಈ ಕಾಯಿಲೆ ಕುರಿತು ಮೂಢನಂಬಿಕೆಗಳು ಹೆಚ್ಚು. ಆದರೆ, ಪರಿಸರ ಮಾಲಿನ್ಯ ಇಲ್ಲದ ಪ್ರದೇಶದಲ್ಲಿ ಈ ಕಾಯಿಲೆಯ ಪ್ರಮಾನ ಕಡಿಮೆ. ಈಗೀಗಂತೂ, ಎಲ್ಲೆಡೆ ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ ಸೇರಿದಂತೆ ಹತ್ತು ಹಲವು ಮಾಲಿನ್ಯಗಳು ಹಬ್ಬುತ್ತಿದ್ದು, ಮನುಷ್ಯನು ಉಸಿರಾಡುವುದೇ ಕಷ್ಟವಾಗಿದೆ. ಈ ಅಸ್ತಮಾ ಕಾಯಿಲೆ ಎಂದರೇನು, ಅದರ ವಿವಿಧ ಪ್ರಕಾರಗಳು, ಕೈಗೊಳ್ಳಬೇಕಾದ ಮುಂಜಾಗ್ರತೆಗಳು, ಈ ಕುರಿತು ನಡೆದ ಅಧ್ಯಯನಗಳು ಇತ್ಯಾದಿ ಮಾಹಿತಿಗಳನ್ನು ಒಳಗೊಂಡ ಕೃತಿ ಇದು.
ಲೇಖಕ ಪ್ರಕಾಶ್ ಸಿ ರಾವ್ ಅವರು ಬೆಂಗಳುರಿನ ಯಶವಂತಪುರದಲ್ಲಿ ಖಾಸಗಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ನಿಮ್ಹಾನ್ಸ್‌ನಲ್ಲಿ ಮಾನಸಿಕ ರೋಗದ ಬಗ್ಗೆ ವಿಶೇಷ ತರಬೇತಿ ಪಡೆದಿದ್ದಾರೆ. ಈ ಮಧ್ಯೆ, ಸೌದಿ ಅರೇಬಿಯಾದ ಸರಕಾರಿ ಆಸ್ಪತ್ರೆಯಲ್ಲಿ ಐದು ವರ್ಷ ಕೆಲಸ ಮಾಡಿದ್ದರು. ಇವರಿಗೆ ವಿಜ್ಞಾನ, ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ಆಸಕ್ತಿ. ತಮ್ಮ ವೃತಿಯಲ್ಲಿ ಬಿಡುವು ಮಾಡಿಕೊಂಡು ಹಲವಾರು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ರೇಡಿಯೋ, ಟಿ. ವಿ.ಗಳಲ್ಲಿ ಆರೋಗ್ಯ ವಿಷಯಗಳ ಮೇಲೆ ಕಾರ್ಯಕ್ರಮ ನೀಡಿದ್ದಾರೆ. ದೈನಿಕ ಹಾಗೂ ವಾರಪತ್ರಿಕೆಗಳಲ್ಲಿ ನೂರಾರು ಆರೋಗ್ಯ ಲೇಖನಗಳನ್ನು ಬರೆದಿದ್ದಾರೆ. ಕೃತಿಗಳು: ಜನಾರೋಗ್ಯದ ...
READ MORE