’ಮಂಡಿಕೀಲಿನ ಸ್ವಾಸ್ಥ್ಯ ಯೋಗದ ಹಾದಿ’ ಪುಸ್ತಕದಲ್ಲಿರುವ ವಿಸ್ಮೃತ ಹಾಗೂ ಸಮಗ್ರ ಮಾಹಿತಿಯು ಹಲವು ಕುತೂಹಲ ಮತ್ತು ವಿಸ್ಮಯವನ್ನು ಉಂಟುಮಾಡುವಂತದ್ದು. ಡಾ. ಓಂಕಾರ್ ಅವರ ಶ್ರದ್ಧೆ, ಪರಿಶ್ರಮ ಹಾಗೂ ಸಂಶೋಧನೆ ಈ ಪುಸ್ತಕದಲ್ಲಿ ಸ್ಪಷ್ಟವಾಗುತ್ತದೆ. ಮಂಡಿನೋವಿನಿಂದ ಬಳಲುತ್ತಿರುವವರಿಗಷ್ಟೇ ಅಲ್ಲದೇ ಉತ್ತಮ ಜೀವನ ಶೈಲಿ ಇಚ್ಛಿಸುವವರೆಲ್ಲರಿಗೂ ಈ ಪುಸ್ತಕವು ಉತ್ತಮ ಕೈಪಿಡಿಯಾಗಿದೆ.
ಡಾ. ಓಂಕಾರ್ ಅವರು ಸೂಚಿಸಿರುವ ವಿಧಾನಗಳು ಸರಳ ಹಾಗೂ ಸ್ಪಷ್ಟತೆಯಿಂದ ಕೂಡಿದ್ದು ಅನುಕರಣಯೋಗ್ಯವಾಗಿವೆ. ಈ ಪುಸ್ತಕದ ಮತ್ತೊಂದು ವಿಶೇಷವೆಂದರೆ, ಹೆಚ್ಚಿನ ದೈಹಿಕ ಶ್ರಮವನ್ನು ಸಹಿಸಲಾಗದ ಅಶಕ್ತರೂ ಹಾಗೂ ವಯಸ್ಸಾದವರೂ ಕೂಡ ಈ ವಿಧಾನಗಳಿಂದ ತಮ್ಮ ಸ್ವಾಸ್ಥ್ಯವನ್ನು ಸುರಕ್ಷಿತವಾದ ರೀತಿಯಲ್ಲಿ ಉತ್ತಮಪಡಿಸಿಕೊಳ್ಳಬಹುದು. ಆರೋಗ್ಯವಂತರೂ ಸಹ ಸ್ವಾಸ್ಥ್ಯ ರಕ್ಷಣೆಯನ್ನಷ್ಟೇ ಅಲ್ಲದೆ ತಮ್ಮ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಈ ಪುಸ್ತಕವನ್ನು ಅವಲಂಬಿಸಬಹುದು.
ವೃತ್ತಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (Indian Institute of Science) ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯ ಸಂಶೋಧನಾ ವಿಜ್ಞಾನಿಯಾಗಿರುವ ಡಾ.ಎಸ್.ಎನ್. ಓಂಕಾರ್ ಅವರು ಬಿ.ಕೆ.ಎಸ್. ಅಯ್ಯಂಗಾರ್ ಅವರ ಆಪ್ತ ಶಿಷ್ಯರುಗಳಲ್ಲಿ ಒಬ್ಬರು. ಕಳೆದ ಮೂರು ದಶಕಗಳಿಂದ ನಿರಂತರವಾಗಿ ಯೋಗ ವಿಜ್ಞಾನವನ್ನು ಅಭ್ಯಾಸ, ಅಧ್ಯಯನ ಮತ್ತು ಅಧ್ಯಾಪನವನ್ನು ಮಾಡಿ, ಯೋಗ ಚಿಕಿತ್ಸೆ ಮತ್ತು ಸಂಶೋಧನೆಗಳನ್ನು ನಡೆಸುತ್ತಿರುವ ಇವರು ಯೋಗ ಶಿಕ್ಷಣವನ್ನು ಕ್ರೀಡಾ ಕ್ಷೇತ್ರದಲ್ಲಿ ಪರಿಚಯಿಸಿದವರಲ್ಲೇ ಮೊದಲಿಗರಾಗಿದ್ಧಾರೆ. ...
READ MORE