‘ ‘ಆರೋಗ್ಯ ಆರೈಕೆ ನಿಮ್ಮ ಕೈಯಲ್ಲಿ’ ಕೃತಿಯು ವಸುಂಧರಾ ಭೂಪತಿ ಅವರ ಆರೋಗ್ಯಕ್ಕೆ ಸಂಬಂಧಿತ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ವೈದ್ಯಕೀಯ ಲೇಖನಗಳನ್ನು ಓದುವವರು ಖಂಡಿತಾ ಓದಿರುತ್ತಾರೆ. `ಜಗತ್ತಿನ ಅತ್ಯಂತ ದೊಡ್ಡ ಡಾಕ್ಟರ್ ಗಳೆಂದರೆ ಡಾ.ಪಥ್ಯ, ಡಾ. ಶಾಂತಿ, ಡಾ.ಆನಂದ‘ ಎಂದು ಜೊನಾಥನ್ ಸ್ವಿಫ್ಟ್ ಹೇಳಿದ್ದನ್ನು ಲೇಖಕಿ ವಸುಂಧರಾ ಭೂಪತಿ ಪುನರ್ ಉಚ್ಛರಿಸುತ್ತಾರೆ.
ಕೆಲವು ಸಾಮಾನ್ಯ ಕಾಯಿಲೆಗಳಿಗೆ ಕಾರಣಗಳು, ಆಹಾರ ಕ್ರಮ, ವೃದ್ಧಾಪ್ಯದ ಸಮಸ್ಯೆಗಳು ಮತ್ತು ಅವುಗಳಿಗೆ ಅನುಸರಿಸಬೇಕಾದ ಕ್ರಮಗಳು ಮುಂತಾದವುಗಳ ಕುರಿತು `ಆರೋಗ್ಯ ಆರೈಕೆ – ನಿಮ್ಮ ಕೈಯಲ್ಲಿ‘ ಪುಸ್ತಕವು ಮಾಹಿತಿಯನ್ನು ನೀಡುತ್ತದೆ. `ನಮ್ಮ ಆಹಾರ ಕ್ರಮ ಸರಿಯಾಗಿದ್ದು ಮನದಲ್ಲಿ ನೆಮ್ಮದಿಯಿದ್ದರೆ ಅನಾರೋಗ್ಯ ನಮ್ಮ ಬಳಿ ಸುಳಿಯಲಾರದು‘ ಎಂದು ನಂಬುವವರು, ನಂಬದಿರುವವರು ಈ ಆರೋಗ್ಯಕರ ಪುಸ್ತಕಕ್ಕೆ ಇಡಬಹುದು ಎಂದು ಅವರು ಹೇಳಿದ್ದಾರೆ.
ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ. ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...
READ MORE