ಎಕ್ಯುಪ್ರೆಷರ್ ಚಿಕಿತ್ಸೆಯ ಕುರಿತು ಮಹತ್ವದ ಮಾಹಿತಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಇದು ಬಹಳ ಸರಳ ಹಾಗೂ ಸುಲಭ ವಿಧಾನದ ಚಿಕಿತ್ಸೆಯಾಗಿದ್ದು, ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಈ ಚಿಕಿತ್ಸೆ ಜನಪ್ರಿಯವಾಗಿದೆ. ವೈದ್ಯಕೀಯ ದುಬಾರಿಯಾಗಿರುವ ಇತ್ತೀಚಿನ ದಿನಗಳಲ್ಲಿ ಎಕ್ಯುಪ್ರೆಷರ್ ಚಿಕಿತ್ಸೆಯ ಬಗ್ಗೆ ಜನಸಮಾನ್ಯರಿಗೆ ಸೂಕ್ತ ಮಾಹಿತಿ ನೀಡುವುದು ಅಗತ್ಯವಾಗಿದೆ. ಈ ಪುಸ್ತಕದ ಮುಖಾಂತರ ಒಂದು ಸರಳ ಹಾಗೂ ಪ್ರಭಾವಶಾಲಿ ಚಿಕಿತ್ಸೆಯ ಮಹತ್ವ ವಿವರಿಸಲಾಗಿದೆ.
ಎಕ್ಯುಪ್ರೆಶರ್ ಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂಬುದನ್ನು ಲೇಖಕರು ಮನವರಿಕೆ ಮಾಡಿಕೊಡುತ್ತಾರೆ. ನಮ್ಮ ಶರೀರದ ರೋಗಳನ್ನು ಯಾವ ರೀತಿ ಈ ಎಕ್ಯುಪ್ರೆಷರ್ ಚಿಕಿತ್ಸೆಯ ಮೂಲಕ ಸರಿಪಡಿಸಬಹುದು ಎಂಬುದನ್ನು ವಿವರವಾಗಿ ಈ ಕೃತಿಯಲ್ಲಿ ಮನವರಿಕೆ ಮಾಡಿಕೊಡಲಾಗಿದೆ.
©2024 Book Brahma Private Limited.