ಪೋಲಿಯೋ ಲಸಿಕೆಗಳ ಇತಿಹಾಸ, ನಡೆದುಬಂದ ಬಗೆ ,ಲಸಿಕೆಗಳ ಸೃಷ್ಟಿಯ ರೋಮಾಂಚಕ ಚರಿತ್ರೆಯನ್ನು ಈ ಕೃತಿಯೂ ನಮ್ಮ ಕಣ್ಮ ಬರುವಂತೆ ಮಾಡುತ್ತದೆ. ಲಸಿಕೆಯ ಉಪಯುಕ್ತತತೆಯನ್ನು, ಮಹತ್ವ, ಅನಿವಾರ್ಯತೆಯನ್ನು , ಈ ಕೃತಿ ವಿವರಿಸುತ್ತದೆ. ಸಿಡುಬು, ಕಾಲರಾ, ಪೋಲಿಯೋ, ಧನುರ್ವಾಯು, ಗಂಟಲಮಾರಿ, ದಡಾರ, ಟೈಫಾಯಿಡ್, ಹಳದಿಜ್ವರ, ಹಕ್ಕಿಜ್ವರ, ಮೆದುಳುಜ್ವರ ಮೊದಲಾದ ರೋಗಗಳು, ಅವುಗಳು ನಮ್ಮ ದೇಹದಲ್ಲಿ ಅವತರಿಸುವ ಮುನ್ನವೇ ಅವುಗಳನ್ನು ಹೇಗೆ ತಡೆಗಟ್ಟಬಹುದು ಈ ಎಲ್ಲಾ ವಿಷಯಗಳ ಬಗ್ಗೆ ಈ ಕೃತಿಯೂ ವಿವರಗಳನ್ನು ಒದಗಿಸುತ್ತದೆ.
ಲೇಖಕ, ಕವಿ ಹಾಗೂ ವೈದ್ಯರಾದ ಡಾ. ಕರವೀರಪ್ರಭು ಕ್ಯಾಲಕೊಂಡ ಅವರು (ಶಸ್ತ್ರಚಿಕಿತ್ಸರು ಹಾಗೂ ಮಕ್ಕಳ ತಜ್ಞರು) ಬಾಗಲಕೋಟೆ ಜಿಲ್ಲೆಯ ಬಾದಾಮಿಯವರು. ‘ನಲವತ್ತರ ಅಂಚಿನಲ್ಲಿ’, ದೃಢ ಸಂಕಲ್ಪ, ಆರೋಗ್ಯಕ್ಕೆ ಕಾಯಕಲ್ಪ, ಹಾಡು ಹೇಳುವೆ ಕೇಳೆ ಗುಬ್ಬಚ್ಚಿ- ಹೀಗೆ 40 ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. 2016ರಲ್ಲಿ ಸರಕಾರಿ ವೃತ್ತಿಯಿಂದ ನಿವೃತ್ತಿ ಪಡೆದಿದ್ದಾರೆ. ಪ್ರಶಸ್ತಿ-ಗೌರವಗಳು: ಗ್ರಾಮೀಣ ಸೇವೆಗಾಗಿ ಡಾ.ಬಿ.ಸಿ.ರಾಯ್ ಪ್ರತಿಷ್ಠಿತ ಪ್ರಶಸ್ತಿ, ಕರ್ನಾಟಕ ರಾಜ್ಯ ವೈದ್ಯ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಕಾವ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಸಮಗ್ರ ಸಾಹಿತ್ಯ ಕ್ಕಾಗಿ ಅಗ್ನಿವೇಷ ಸಾಹಿತ್ಯ ಪ್ರಶಸ್ತಿ,, ಬೆಸ್ಟ್ ಐ ಸಿ ಡಿ ಎಸ್ ಮೆಡಿಕಲ್ ಆಫಿಸರ್ ಆಫ್ ...
READ MORE