ಬಿ.ಕೆ.ಎಸ್. ಅಯ್ಯಂಗಾರ್ ಅವರು ವಿಶ್ವಪ್ರಸಿದ್ಧಿಯ ಯೋಗ ಸಾಧಕರು. ವಿಶ್ವದಾದ್ಯಂತ ಸುಮಾರು 28 ದೇಶಗಳಲ್ಲಿ ಯೋಗ ತರಬೇತಿ ಕೇಂದ್ರಗಳನ್ನು ಆರಂಭಿಸಿ, ಯೋಗ ಕಲಿಕೆಯ ಅಗತ್ಯ ಹಾಗೂ ಅನಿವಾರ್ಯತೆಯನ್ನು ಜನಮಾನಸದಲ್ಲಿ ಮೂಡಿಸುತ್ತಾ ಭಾರತೀಯ ಸಂಸ್ಕೃತಿಯ ಕೊಡುಗೆಗಳನ್ನು ಪರಿಚಯಿಸಿದವರು. ಯೋಗ ಮಹತ್ವ, ಯೋಗದ ವೈವಿಧ್ಯಮಯ ಪ್ರಕಾರಗಳು, ಆರೋಗ್ಯಕಾರಿ ಪರಿಣಾಮಗಳು, ಮನಸ್ಸಿನ ಮೇಲೆ ನಿಯಂತ್ರಣದ ವಿಧಾನ ಇತ್ಯಾದಿ ಕುರಿತ ವಿವರ ಮಾಹಿತಿಗಳನ್ನು ಈ ಕೃತಿ ಒಳಗೊಂಡಿದೆ.
ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಅವರು ಮೈಸೂರಿನವರು. ಭಾರತೀಯ ಯೋಗವನ್ನು ಪ್ರಪಂಚಕ್ಕೆ ಪರಿಚಯಿಸಿದವರು. ಜನನ: 1918ರ ಡಿಸೆಂಬರ್ 14 ರಂದು. ತಂದೆ ಕೃಷ್ಣಮಾಚಾರ್. ತಾಯಿ ಶೇಷಮ್ಮ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ಬಡತನ ಕಾಡುತ್ತಿತ್ತು. ಯೋಗ ಗುರು ತಿರುಮಲೈ ಕೃಷ್ಣಮಾಚಾರ್ ಅವರ ಮನೆಯಲ್ಲೇ ಇದ್ದು ಯೋಗ ಕಲಿತರು. ಪುಣೆಯಲ್ಲಿ ಯೋಗಾಭ್ಯಾಸ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಈವರೆಗೂ ಜಗತ್ತಿನ 40 ರಾಷ್ಟ್ರಗಳಲ್ಲಿ 180 ಯೋಗ ಕೆಂದ್ರಗಳನ್ನು ತೆರೆದಿದ್ದಾರೆ. ತಮಗೆ 90 ವರ್ಷದ ಹುಟ್ಟುಹಬ್ಬದ ನಿಮಿತ್ತ ಅವರು ಮೈಸೂರು ಪ್ರಾಣಿ ಸಂಗ್ರಹಾಲಯ ಅಭಿವೃದ್ಧೀಗಾಗಿ ಸುಮಾರು 20 ಲಕ್ಷ ರೂ.ಗಳನ್ನು ಕೊಡುಗೆಯಾಗಿ ನೀಡಿದ್ದರು. 1966 ರಲ್ಲೇ ಅವರ ಪ್ರಥಮ ಪುಸ್ತಕ ...
READ MORE