ಆಲ್ಕೋಹಾಲ್, ಅಫೀಮು, ಗಾಂಜಾ, ಮರಿಜುವಾನಾ, ಕೊಕೇನ್‌ಗಳಿಗೆ ಇಂದಿನ ಯುವ ಪೀಳಿಗೆ ಬಲಿಯಾಗುತ್ತಿರುವುದು ಪೋಷಕರಿಗೆ ಆತಂಕದ ಸಂಗತಿ. ಸಮಾಜಕ್ಕೆ ಅಪಾಯಕಾರಿ. ಮಾದಕ ವಸ್ತುವಿನ ಸೇವನೆಯಿಂದ ಮೈ-ಮನಸ್ಸಿನ ಸಮತೋಲನ ತಪ್ಪಿ, ಅನೇಕ ಬಗೆಯ ಮನೋ-ದೈಹಿಕ ಬೇನೆಗಳು ಕಾಣಿಸಿಕೊಳ್ಳುತ್ತವೆ. ಈ ವಸ್ತುಗಳಿಂದಾಗಿ ದಿನೇ ದಿನೆ ಅಪಘಾತ-ಅಪರಾಧಗಳು ಹೆಚ್ಚುತ್ತಿವೆ. ಇದರ ಬಗ್ಗೆ ಓದುಗರ ತಿಳಿವನ್ನು, ಅರಿವನ್ನು ಹೆಚ್ಚಿಸುವ ಕೃತಿ ಇದಾಗಿದೆ.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE