‘ಕುಟುಂಬದ ಆರೋಗ್ಯ, ಆಹಾರದ ಗುಣಕಾರಿ ಮಾರ್ಗದರ್ಶಿ’ಯಾಗಿ ಕೃತಿಯನ್ನು ಎನ್. ವಿಶ್ವರೂಪಾಚಾರ್ ಅವರ ರಚಿಸಿದ್ದು, ಈ ಕೃತಿಯು 39 ಆರೋಗ್ಯ ಕುರಿತಾದ ಲೇಖನಗಳನ್ನು ಒಳಗೊಂಡಿದೆ. ಒಳ್ಳೆಯ ಆರೋಗ್ಯದ ಆಯ್ಕೆ, ಒತ್ತಡಕ್ಕೆ ಒಳಗಾಗಿದ್ದೀರಾ?, ಶಕ್ತಿಯ ಚಾರ್ಟ್, ನ್ಯೂರಾಟಿಕ್ ಎನರ್ಜಿ, ನೀವು ಸಂತೋಷ ಮತ್ತು ಪ್ರೀತಿಯ ಸಂಬಂಧವನ್ನು ಹೊಂದಿದ್ದೀರಾ, ಮಾನಸಿಕವಾಗಿ ಬಲಗೊಳ್ಳಲು ಏನು ಮಾಡಬೇಕು? ಆರೋಗ್ಯ ಕುಟುಂಬ ಎಂದರೇನು?, ಬಲವಾದ ಕುಟುಂಬ ಯಾವುದು?, ಅತಿಯಾದ ಬೆವರು, ಆಯಾಸಗೊಳ್ಳುವಿಕೆ, ನಿದ್ರಿಸಲು ಕಷ್ಟ, ಒತ್ತಡ ಅಥವಾ ಸ್ಟ್ರೆಸ್, ಖಿನ್ನತೆಯ ಭಾವನೆ, ಬಾಯಿಹುಣ್ಣು, ದುರ್ವಾಸನೆಯ ಉಸಿರು, ಸಾಧಾರಣ ನೆಗಡಿ, ಎದೆಯುರಿ, ಗುದದ್ವಾರದ ತುರಿಕೆ, ಬಿಕ್ಕಳಿಕೆ, ಓಕರಿಕೆ ಮತ್ತು ವಾಂತಿ, ಮೂತ್ರಪಿಂಡದಲ್ಲಿ ಕಲ್ಲುಗಳು, ಆತಂಕ. ಮಲಬದ್ಧತೆ, ಸೀತಾಳೆ ಸಿಡುಬು, ಅಧಿಕ ರಕ್ತದೊತ್ತಡ, ತಲೆನೋವು, ಮುಟ್ಟು ಮುಂಚಿನ ಲಕ್ಷಣಾವಳಿ, ಆರೋಗ್ಯ ಜೀವನ ಎಂದರೇನು? ಇಂತಹ ಅನೇಕ ಲೇಖನಗಳು ಇಲ್ಲಿವೆ.
’ವಿಶ್ವರೂಪ’ ಎಂಬ ಕಾವ್ಯನಾಮದಿಂದ ಬರೆಯುವ ಎನ್. ವಿಶ್ವರೂಪಾಚಾರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ವಿಜಯಪುರದವರು. ತಂದೆ ಸಿ.ಎಂ. ನಂಜುಂಡಾಚಾರ್ ಮತ್ತು ತಾಯಿ ಲಿಂಗಮ್ಮ. ಆರಂಭಿಕ ಶಿಕ್ಷಣವನ್ನು ವಿಜಯಪುರ ಹಾಗೂ ರಾಮನಗರಗಳಲ್ಲಿ ಪಡೆದ ಅವರು ಮೈಸೂರು ಐ.ವಿ. ಸಂಜೆ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹೆಲ್ತ್ ಸೂಪರ್‌ವೈಸರ್ ಆಗಿ ವೃತ್ತಿ ಜೀವನ ಆರಂಭಿಸಿದ ಅವರು 34 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದಲ್ಲಿ 13 ವರ್ಷ ಜನಾರೋಗ್ಯ ಬೋಧಕರಾಗಿ ಕೆಲಸ ಮಾಡಿರುವ ಅವರು ಹೈಸ್ಕೂಲ್‌ನಲ್ಲಿ ...
READ MORE