‘ಸಕ್ಕರೆ ಕಾಯಿಲೆ- ಪ್ರಶ್ನೆ ಉತ್ತರ’ ಕೃತಿಯು ಲೇಖಕ ಡಾ. ಎಸ್.ಪಿ ಯೋಗಣ್ಣ ಅವರ ಸಕ್ಕರೆ ಕಾಯಿಲೆ ಕುರಿತಂತೆ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿ 40 ಅಧ್ಯಾಯಗಳಿವೆ. ಸಕ್ಕರೆ ಕಾಯಿಲೆಯ ಸಂಕ್ಷಿಪ್ತ ಪರಿಚಯ, ಗ್ಲೂಕೋಸ್ ಚಯಾಪಚಯಕ್ರಿಯೆ, ಪ್ಯಾಂಕ್ರಿಯಾಸ್ ಗ್ರಂಥಿ, ರಚನೆ ಮತ್ತು ಕಾರ್ಯಗಳು, ರಕ್ತ ಗ್ಲೋಕೋಸ್ ಏರಿಕೆ, ರಕ್ತ ಗ್ಲೂಕೋಸ್ ಇಳಿಕೆ, ಸಕ್ಕರೆ ಕಾಯಿಲೆ ಎಂದರೇನು? ಮತ್ತು ವಿಧಗಳು, ಸಕ್ಕರೆ ಕಾಯಿಲೆಯ ತೊಂದರೆಗಳು, ಸಕ್ಕರೆ ಕಾಯಿಲೆಯ ದೃಢೀಕರಣ, ಸಕ್ಕರೆ ಕಾಯಿಲೆಗೆ ಮೂಲ ಕಾರಣಗಳು, ಸ್ತ್ರೀಯರಲ್ಲಿ ಸಕ್ಕರೆ ಕಾಯಿಲೆ, ಸಂತಾನ ನಿರೋಧಕ ವಿಧಾನಗಳು, ಸಕ್ಕರೆ ಕಾಯಿಲೆಯಿಂದ ಉಂಟಾಗುವ ಜಟಿಲತೆಗಳು, ಮೂತ್ರ ವ್ಯವಸ್ಥೆಯ ಜಟಿಲತೆಗಳು, ಹೃದಯ ಮತ್ತು ರಕ್ತನಾಳಗಳ ಜಟಿಲತೆಗಳು, ಚಯಾಪಚಯದ ಜಟಿಲತೆಗಳು, ನರಮಂಡಲದ ಜಟಿಲತೆಗಳು, ಸಕ್ಕರೆ ಕಾಯಿಲೆಯ ಪಾದ (ಡಯಾಬಿಟಿಕ್ ಫುಟ್), ಜೀರ್ಣಾಂಗಗಳ ಜಟಿಲತೆಗಳು, ಲೈಂಗಿಕ ಮತ್ತು ಸಂತಾನೋತ್ಪತ್ತಿಯ ಅವ್ಯವಸ್ಥೆಗಳು, ಚರ್ಮದ ಜಟಿಲತೆಗಳು, ಕಣ್ಣಿನ ಜಟಿಲತೆಗಳು, ರೋಗ ನಿರೋಧಕ ಶಕ್ತಿಯ ಅವ್ಯವಸ್ಥೆಗಳು, ಸೋಂಕುಗಳು, ಉಸಿರಾಂಗದ ಜಟಿಲತೆಗಳು, ಸಕ್ಕರೆ ಕಾಯಿಲೆ, ವಯಸ್ಸಾಗುವಿಕೆ ಮತ್ತು ಜೀವಾವಧಿ, ಸಕ್ಕರೆ ಕಾಯಿಲೆಯ ಜಟಿಲತೆಗಳನ್ನು ತಟೆಗಟ್ಟುವುದು ಹೇಗೆ?, ಸಕ್ಕರೆ ಕಾಯಿಲೆಗೆ ಚಿಕಿತ್ಸಾವಿಧಾನಗಳು, ಸಕ್ಕರೆ ಕಾಯಿಲೆ ಮತ್ತು ಆಹಾರ, ಕೊಬ್ಬು ಮತ್ತು ಸಕ್ಕರೆ ಕಾಯಿಲೆ, ದೇಹದ ತೂಕ ಮತ್ತು ಸಕ್ಕರೆ ಕಾಯಿಲೆ, ಸಕ್ಕರೆ ಕಾಯಿಲೆ ಮತ್ತು ವ್ಯಾಯಾಮ, ಸಕ್ಕರೆ ಕಾಯಿಲೆ ಮತ್ತು ಧೂಮಪಾನ, ಸಕ್ಕರೆ ಕಾಯಿಲೆ ಮತ್ತು ಮಧ್ಯಪಾನ, ಸಕ್ಕರೆ ಕಾಯಿಲೆ ಮತ್ತು ಮಾನಸಿಕ ಸಂಕಷ್ಟ, ಸಕ್ಕರೆ ಕಾಯಿಲೆ ಮತ್ತು ಯೋಗ, ಔಷಧಗಳ ಚಿಕಿತ್ಸೆ, ಸಕ್ಕರೆ ಕಾಯಿಲೆಯನ್ನು ತಡೆಗಟ್ಟುವಿಕೆ, ಸಕ್ಕರೆ ಕಾಯಿಲೆ ಬಗ್ಗೆ ಕೆಲವು ಕಲ್ಪನೆಗಳು, ಸಕ್ಕರೆ ಕಾಯಿಲೆಯನ್ನು ವಾಸಿಮಾಡಬಹುದೇ..?, ಸಕ್ಕರೆ ಕಾಯಿಲೆಯೊಂದಿಗಿನ ಬದುಕು.. ಹೀಗೆ ಅನೇಕ ವಿಚಾರಗಳನ್ನು ಈ ಕೃತಿಯು ಒಳಗೊಂಡಿದೆ.
ಡಾ. ಎಸ್.ಪಿ ಯೋಗಣ್ಣ ಅವರು ಮೂಲತಃ ಮೈಸೂರು ಜಿಲ್ಲೆಯ ಸಾಲಿಗ್ರಾಮದವರು. ಎಸ್.ಎಸ್.ಎಲ್.ಸಿ ಯಲ್ಲಿ 30ನೇ ರ್‍ಯಾಂಕ್ ಪಡೆದು, ಎಂ.ಬಿ.ಬಿ.ಎಸ್ (3 ನೇ ರ್‍ಯಾಂಕ್- 1977), ಎಂ.ಡಿ.(ಮೆಡಿಸಿನ್-1981), ಎಫ್, ಐ.ಸಿ.ಎ( ಯು.ಎಸ್.ಎ,-1982), ಎಫ್.ಸಿ.ಸಿ.ಪಿ (1983) ಯನ್ನು ಯು.ಎಸ್.ಎ ಯಲ್ಲಿ ಪಡೆದಿರುತ್ತಾರೆ. ಕನ್ನಡದಲ್ಲಿ ವೈದ್ಯಶಾಸ್ತ್ರದ ಬೆಳವಣಿಗೆ, ವ್ಯವಸಾಯ, ಮೀನುಗಾರಿಕೆ, ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳು ಅವರ ವಿಶೇಷ ಆಸಕ್ತಿಯಾಗಿದೆ. ಮೈಸೂರಿನ ಎಂ.ಎಂ.ಸಿ ಮತ್ತು ಆರ್. ಐ ಕಾಲೇಜಿನಲ್ಲಿ ವೈದ್ಯಶಾಸ್ತ್ರ ಪ್ರಾಧ್ಯಾಪಕರು, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಸಲಹಾ ವೈದ್ಯ ತಜ್ಞರು ಮತ್ತು ಹೃದ್ರೋಗ ತಜ್ಞರು, ಆರೋಗ್ಯ ಯೋಗ ವೈದ್ಯಕೀಯ ಸಲಹಾ ಕೇಂದ್ರ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ...
READ MORE